ADVERTISEMENT

ಎಸ್‌ಬಿಐಗೆ ₹21,317 ಕೋಟಿ ಲಾಭ

ಪಿಟಿಐ
Published 7 ಫೆಬ್ರುವರಿ 2026, 14:02 IST
Last Updated 7 ಫೆಬ್ರುವರಿ 2026, 14:02 IST
ಎಸ್‌ಬಿಐ
ಎಸ್‌ಬಿಐ   

ಮುಂಬೈ: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ) ₹21,317 ಕೋಟಿ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹18,853 ಕೋಟಿ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 13ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್‌ ಷೇರುಪೇಟೆಗೆ ಶನಿವಾರ ತಿಳಿಸಿದೆ.

ಬ್ಯಾಂಕ್‌ನ ಬಡ್ಡಿ ವರಮಾನದಲ್ಲಿ ಶೇ 9ರಷ್ಟು ಹೆಚ್ಚಾಗಿದ್ದು, ₹45,190 ಕೋಟಿಯಾಗಿದೆ. ಒಟ್ಟು ವರಮಾನವು ₹1.28 ಲಕ್ಷ ಕೋಟಿಯಿಂದ ₹1.40 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ವೆಚ್ಚವು ₹1.04 ಲಕ್ಷ ಕೋಟಿಯಿಂದ ₹1.08 ಲಕ್ಷ ಕೋಟಿಗೆ ಏರಿಕೆಯಾಗಿದೆ.

ADVERTISEMENT

ವಸೂಲಾಗದ ಸಾಲದ ಪ್ರಮಾಣ ಶೇ 1.73ರಿಂದ ಶೇ 1.57ಕ್ಕೆ ಇಳಿದಿದೆ. ಬ್ಯಾಂಕ್‌ನ ಬಂಡವಾಳ ಮೀಸಲು ಅನುಪಾತ (ಸಿಎಆರ್‌) ಶೇ 14.04ರಷ್ಟಾಗಿದೆ ಎಂದು ತಿಳಿಸಿದೆ.