ADVERTISEMENT

ಗ್ರಾಹಕ ಸೇವಾ ಕೇಂದ್ರ ಆರಂಭಿಸಿದ ಎಸ್‌ಬಿಐ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 20:42 IST
Last Updated 2 ಸೆಪ್ಟೆಂಬರ್ 2020, 20:42 IST

ಬೆಂಗಳೂರು: ಕೇಂದ್ರ ಸರ್ಕಾರದ ಮಾಲೀಕತ್ವದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ)‌ ರಾಜ್ಯದಾದ್ಯಂತ ಒಟ್ಟು 501 ‘ಗ್ರಾಹಕ ಸೇವಾ ಕೇಂದ್ರ’ಗಳನ್ನು ಬುಧವಾರ ಆರಂಭಿಸಿರುವುದಾಗಿ ತಿಳಿಸಿದೆ.

ಈ ಕೇಂದ್ರಗಳ ಮೂಲಕ ಜನ ಉಳಿತಾಯ ಖಾತೆ ತೆರೆಯಬಹುದು, ಕೆಲವು ಬಿಲ್‌ ಪಾವತಿ ಮಾಡಬಹುದು, ಹಣ ವರ್ಗಾವಣೆ ಮಾಡಬಹುದು, ತಮ್ಮ ಪಾಸ್‌ಪುಸ್ತಕಗಳನ್ನು ಅಪ್ಡೇಟ್‌ ಮಾಡಿಕೊಳ್ಳಬಹುದು ಹಾಗೂ ತಮ್ಮ ಕೆವೈಸಿ ವಿವರಗಳನ್ನುಸಲ್ಲಿಸಬಹುದು ಎಂದು ಎಸ್‌ಬಿಐನ ಪ್ರಕಟಣೆ ತಿಳಿಸಿದೆ.

‘ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಹತ್ತಿರವಾಗುವ ಇನ್ನೊಂದು ಕ್ರಮ ಇದು. ಈ ಕೇಂದ್ರಗಳು ಎಲ್ಲ ದಿನಗಳಲ್ಲೂ ಕೆಲಸ ನಿರ್ವಹಿಸಲಿವೆ. ಗ್ರಾಹಕರಿಗೆ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಸೇವೆಗೆ ಲಭ್ಯವಿರುತ್ತವೆ’ ಎಂದು ಅದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.