ADVERTISEMENT

ಬುಧವಾರದಿಂದ ಶೇ 0.25ರಷ್ಟು ಎಂಸಿಎಲ್‌ಆರ್‌ ಇಳಿಕೆ: ಎಸ್‌ಬಿಐ

ಪಿಟಿಐ
Published 8 ಜೂನ್ 2020, 21:50 IST
Last Updated 8 ಜೂನ್ 2020, 21:50 IST
   

ಮುಂಬೈ: ಬುಧವಾರದಿಂದ ಜಾರಿಗೆ ಬರುವಂತೆ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ(ಎಂಸಿಎಲ್‌ಆರ್)‌ ಬಡ್ಡಿದರವನ್ನು ಶೇ 0.25ರಷ್ಟು ಇಳಿಕೆ ಮಾಡುವುದಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹೇಳಿದೆ.

ಹೀಗಾಗಿ ಒಂದು ವರ್ಷದ ಎಂಸಿಎಲ್ಆರ್‌ಶೇ 7.25 ರಿಂದ ಶೇ 7ಕ್ಕೆ ಇಳಿಕೆಯಾಗಲಿದೆ. ಇದರಿಂದ ಅರ್ಹ ಗೃಹ ಸಾಲದ ‘ಇಎಂಐ’ ಸಹ ಕಡಿಮೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ವೇಳೆ ಜುಲೈ 1ರಿಂದ ಅನ್ವಯಿಸುವಂತೆ ರೆಪೊ ಆಧಾರಿತ ಸಾಲಗಳ ಮೇಲಿನ ಬಡ್ಡಿದರ (ಆರ್‌ಎಲ್‌ಎಲ್‌ಆರ್‌) ಮತ್ತುಬಾಹ್ಯ ಮಾನದಂಡ (ಇಬಿಆರ್‌) ಆಧರಿಸಿದ ಬಡ್ಡಿದರ ಶೇ 0.40ರಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಆರ್‌ಎಲ್‌ಎಲ್‌ಆರ್‌ ನೀಡಿಕೆ ದರ ಶೇ 6.65 ರಿಂದ ಶೇ 6.25ಕ್ಕೆ ಹಾಗೂ ಇಆರ್‌ಬಿ ನೀಡಿಕೆ ದರ ಶೇ 7.05 ರಿಂದ ಶೇ 6.65ಕ್ಕೆ ತಲುಪಲಿದೆ.

ADVERTISEMENT

ಆರ್‌ಬಿಐ ಮೇ 22ರಂದು ರೆಪೊ ದರವನ್ನು ಶೇ 0.40ರಷ್ಟು ಕಡಿಮೆ ಮಾಡಿತ್ತು. ಇದಕ್ಕೆ ಅನುಗುಣವಾಗಿ ಎಸ್‌ಬಿಐ ಇಆರ್‌ಬಿ ಮತ್ತು ಆರ್‌ಎಲ್‌ಎಲ್‌ಆರ್‌ನಲ್ಲಿ ಕಡಿತ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.