ADVERTISEMENT

ಅಮೆರಿಕದಲ್ಲಿ ವಂಚನೆ ಪ್ರಕರಣ: ಎಸ್‌ಇಸಿ ನೋಟಿಸ್ ಪಡೆಯಲು ಗೌತಮ್ ಅದಾನಿ ಸಮ್ಮತಿ

ಏಜೆನ್ಸೀಸ್
Published 31 ಜನವರಿ 2026, 10:31 IST
Last Updated 31 ಜನವರಿ 2026, 10:31 IST
ಗೌತಮ್ ಅದಾನಿ
ಗೌತಮ್ ಅದಾನಿ   

ನವದೆಹಲಿ: ಅಮೆರಿಕದಲ್ಲಿ ಬಂಡವಾಳ ಸಂಗ್ರಹಿಸಲು ಇಲ್ಲಿನ ಷೇರು ಮಾರುಕಟ್ಟೆ ನಿಯಮಗಳ ಉಲ್ಲಂಘನೆ ಹಾಗೂ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಗೌತಮ್‌ ಅದಾನಿ ಅಮೆರಿಕದ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನೀಡುವ ಕಾನೂನು ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.

ಗೌತಮ್ ಅದಾನಿ ಮತ್ತು ಅಣ್ಣನ ಮಗ ಸಾಗರ್ ಅದಾನಿ ಎಸ್‌ಇಸಿ ನೀಡುವ ಕಾನೂನು ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೆ 90 ದಿನಗಳಲ್ಲಿ ಉತ್ತರ ನೀಡಲಾಗುವುದು ಎಂದು ಅದಾನಿ ಗ್ರೂಪ್‌ನ ವಕ್ತಾರರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನ ಫೆಡರಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಎಸ್‌ಇಸಿ ನೀಡುವ ನೋಟಿಸ್‌ ಅನ್ನು ಪಡೆದು 90 ದಿನಗಳಲ್ಲಿ ಉತ್ತರಿಸುವುದಾಗಿ ಅದಾನಿ ಪರ ವಕೀಲರು ಒಪ್ಪಿಕೊಂಡಿದ್ದಾರೆ.

ಅದಾನಿ ಸಮೂಹವು ಸೌರ ವಿದ್ಯುತ್‌ ಗುತ್ತಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ 265 ದಶಲಕ್ಷ ಡಾಲರ್ (₹2,434 ಕೋಟಿ) ಲಂಚ ನೀಡಿದೆ ಎನ್ನುವ ಆರೋಪದಡಿ ಅಮೆರಿಕದ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಮತ್ತು ಅವರ ಅಣ್ಣನ ಮಗ ಸಾಗರ್ ಅದಾನಿ ವಿರುದ್ಧ ವಿಚಾರಣೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.