ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ 396 ಅಂಶಗಳ ಚೇತರಿಕೆ ಕಂಡಿದೆ.
ಸೆಪ್ಟೆಂಬರ್ ತಿಂಗಳ ವಾಯಿದಾ ವಹಿವಾಟು ಅಂತ್ಯ ಮತ್ತು ಜಾಗತಿಕ ಷೇರುಪೇಟೆಗಳಲ್ಲಿ ಕಂಡು ಬಂದ ಖರೀದಿ ಉತ್ಸಾಹದ ಕಾರಣದಿಂದ ಸೂಚ್ಯಂಕ ಏರಿಕೆ ದಾಖಲಿಸಿದೆ.
ಸಂವೇದಿ ಸೂಚ್ಯಂಕದಲ್ಲಿನ ಪ್ರಮುಖ ಷೇರುಗಳಾದ ಐಸಿಐಸಿಐ ಬ್ಯಾಂಕ್, ಆರ್‌ಐಎಲ್, ಎಲ್‌ಆ್ಯಂಡ್‌ಟಿ ಮತ್ತು ಮಾರುತಿ ಷೇರುಗಳಲ್ಲಿನ ಗಳಿಕೆಯು ಸೂಚ್ಯಂಕ ಏರಿಕೆಗೆ ಕಾರಣವಾಗಿದೆ.
‘ಚೀನಾ ಜತೆಗಿನ ವಾಣಿಜ್ಯ ಒಪ್ಪಂದವು ನಿರೀಕ್ಷೆಗಿಂತ ಬೇಗ ಜಾರಿಗೆ ಬರಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಜಾಗತಿಕ ಷೇರುಪೇಟೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಗಳಿಂದ ಪ್ರಭಾವಿತರಾಗುವ ದೇಶಿ ಹೂಡಿಕೆದಾರರು ಕೂಡ ಖರೀದಿಗೆ ಆಸಕ್ತಿ ತೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.