ADVERTISEMENT

52 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಪಿಟಿಐ
Published 15 ಫೆಬ್ರುವರಿ 2021, 16:44 IST
Last Updated 15 ಫೆಬ್ರುವರಿ 2021, 16:44 IST
ಮುಂಬೈ ಷೇರುಪೇಟೆ
ಮುಂಬೈ ಷೇರುಪೇಟೆ   

ನವದೆಹಲಿ: ಮುಂಬೈ ಷೇರುಪೇಟೆಯು ಇದೇ ಮೊದಲ ಬಾರಿಗೆ 52 ಸಾವಿರದ ಗಡಿ ದಾಟಿ ವಹಿವಾಟು ಅಂತ್ಯಗೊಳಿಸಿತು. ದಿನದ ವಹಿವಾಟಿನಲ್ಲಿ 610 ಅಂಶ ಜಿಗಿತ ಕಂಡು 52,154 ಅಂಶಗಳ ಗರಿಷ್ಠ ಮಟ್ಟ ತಲುಪಿತು.

‘ಜಾಗತಿಕ ವಿದ್ಯಮಾನಗಳು ಪೂರಕವಾಗಿರುವುದು ಮತ್ತು ಕಾರ್ಪೊರೇಟ್‌ ಗಳಿಕೆ ಸುಧಾರಿಸುತ್ತಿರುವುದು ಷೇರುಪೇಟೆಯ ಈ ಏರಿಕೆಗೆ ಕಾರಣವಾಯಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

2021ರ ಫೆಬ್ರುವರಿ 3ರಂದು ಸೆನ್ಸೆಕ್ಸ್‌ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿ ವಹಿವಾಟು ಅಂತ್ಯಗೊಳಿಸಿತು. ಆ ಬಳಿಕ ಫೆಬ್ರುವರಿ 8ರಂದು 51 ಸಾವಿರದ ಗಡಿ ದಾಟಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.