ADVERTISEMENT

ಬಿಎಸ್‌ಇ ವಾರದ ಏರಿಕೆ 1,812 ಅಂಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 16:19 IST
Last Updated 10 ಅಕ್ಟೋಬರ್ 2020, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 1,812 ಅಂಶ ಏರಿಕೆ ಕಂಡು 40,509 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಬಿಎಸ್‌ಇನಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹ 156.92 ಲಕ್ಷ ಕೋಟಿಗಳಿಂದ ₹ 160.68 ಲಕ್ಷ ಕೋಟಿಗಳಿಗೆ ₹ 3.76 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ.

ಆರ್ಥಿಕತೆಯು ಬಹಳ ಬೇಗನೆ ಚೇತರಿಸಿಕೊಳ್ಳುತ್ತಿರುವುದು ಹಾಗೂ ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆಯು ಸದ್ಯ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಕೈಗಾರಿಕಾ ಚಟುವಟಿಕೆಗಳು ಕೋವಿಡ್‌–19ಗೂ ಮುಂಚಿನ ಸ್ಥಿತಿಯತ್ತ ಮರಳುತ್ತಿರುವುದು, ಎರಡನೇ ತ್ರೈಮಾಸಿಕದ ಸಕಾರಾತ್ಮಕ ಆರಂಭ, ಆರ್‌ಬಿಐನ ಹಣಕಾಸು ನೀತಿಯ ಬೆಂಬಲ ಹಾಗೂ ಆರ್ಥಿಕ ಉತ್ತೇಜನ ಕ್ರಮಗಳಿಂದಾಗಿ ಈ ವಾರದಲ್ಲಿ ಸೂಚ್ಯಂಕವು ಹೊಸ ಎತ್ತರಕ್ಕೆ ಏರಿಕೆ ಆಗಿತ್ತು.

₹ 15.10 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದುವ ಮೂಲಕ ರಿಲಯನ್ಸ್‌ ಇಂಡಸ್ಟ್ರೀಸ್‌ ಮೊದಲ ಸ್ಥಾನದಲ್ಲಿದೆ. ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹ 10.56 ಲಕ್ಷ ಕೋಟಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರುಕಟ್ಟೆ ಮೌಲ್ಯ ₹ 6.78 ಲಕ್ಷ ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.