ADVERTISEMENT

ಚಿನ್ನದ ದರ ಗರಿಷ್ಠ ₹ 1,840 ಹೆಚ್ಚಳ

ಪಿಟಿಐ
Published 25 ಫೆಬ್ರುವರಿ 2020, 4:10 IST
Last Updated 25 ಫೆಬ್ರುವರಿ 2020, 4:10 IST
   

ನವದೆಹಲಿ/ಮುಂಬೈ : ದೇಶದಾದ್ಯಂತ ಚಿನ್ನದ ದರ 10 ಗ್ರಾಂಗೆ ಗರಿಷ್ಠ ₹ 1,840ರವರೆಗೂ ಏರಿಕೆಯಾಗಿದೆ.

10 ಗ್ರಾಂ ಚಿನ್ನದ ದರಮುಂಬೈನಲ್ಲಿ ₹ 1,840ರಂತೆ ಹೆಚ್ಚಾಗಿ₹ 43,415ರಂತೆ ಮಾರಾಟವಾಯಿತು. ದೆಹಲಿಯಲ್ಲಿ ₹ 953 ರಂತೆ ಏರಿಕೆ ಕಂಡು ₹ 44,472ರಂತೆ ಹಾಗೂ ಬೆಂಗಳೂರಿನಲ್ಲಿ ₹ 919ರಂತೆ ಹೆಚ್ಚಾಗಿ₹ 43,640ಕ್ಕೆ ತಲುಪಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ ಭಾರಿ ಏರಿಕೆ ಕಾಣುವಂತಾಯಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ADVERTISEMENT

ಬೆಳ್ಳಿ ದರ: ಬೆಳ್ಳಿ ದಾರಣೆ ಕೆ.ಜಿಗೆ ಮುಂಬೈನಲ್ಲಿ ₹ 1,430ರಂತೆ ಹೆಚ್ಚಾಗಿ ₹49,035, ದೆಹಲಿಯಲ್ಲಿ₹ 586ರಂತೆ ಹೆಚ್ಚಾಗಿ ₹ 49,990ರಂತೆ ಹಾಗೂ ಬೆಂಗಳೂರಿನಲ್ಲಿ ₹ 700ರಂತೆ ಏರಿಕೆಯಾಗಿ ₹ 49,500ರಂತೆ ಮಾರಾಟವಾಯಿತು.

ರೂಪಾಯಿ 34 ಪೈಸೆ ಕುಸಿತ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 34 ಪೈಸೆ ಕುಸಿತ ಕಂಡು ಒಂದು ಡಾಲರ್‌ಗೆ ಮೂರು ತಿಂಗಳ ಕನಿಷ್ಠ ಮಟ್ಟವಾದ ₹ 71.98ರಂತೆ ವಿನಿಮಯಗೊಂಡಿತು.

ತೈಲ ದರ ಇಳಿಕೆ: ಕೋವಿಡ್‌ ಹರಡುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಸೋಮವಾರ ಕಚ್ಚಾ ತೈಲ ದರ ಶೇ 4ರಷ್ಟು ಇಳಿಕೆ ಕಂಡಿದೆ. ಒಂದು ಬ್ಯಾರೆಲ್‌ಗೆ 56.11 ಡಾಲರ್‌ಗಳಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.