ADVERTISEMENT

ರಿಲಯನ್ಸ್‌ ರಿಟೇಲ್‌ನಲ್ಲಿ ಸಿಲ್ವರ್ ಲೇಕ್ ಹೂಡಿಕೆ

ಪಿಟಿಐ
Published 9 ಸೆಪ್ಟೆಂಬರ್ 2020, 16:17 IST
Last Updated 9 ಸೆಪ್ಟೆಂಬರ್ 2020, 16:17 IST
   

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ರಿಟೇಲ್‌ ವೆಂಚರ್ಸ್‌ನ ಶೇಕಡ 1.75ರಷ್ಟು ಷೇರುಗಳನ್ನು ಅಮೆರಿಕದ ಸಿಲ್ವರ್ ಲೇಕ್ ಕಂಪನಿ ಖರೀದಿಸಲಿದೆ. ಈ ಖರೀದಿಯ ಮೊತ್ತ ₹ 7,500 ಕೋಟಿ.

ಸಿಲ್ವರ್ ಲೇಕ್‌ ಕಂಪನಿಯು ರಿಲಯನ್ಸ್ ಒಡೆತನದ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಕೂಡ ಹೂಡಿಕೆ ಮಾಡಿದೆ. ರಿಲಯನ್ಸ್‌ನ ರಿಟೇಲ್‌ ವಹಿವಾಟಿನಲ್ಲಿ ವಿಶ್ವದ ತಂತ್ರಜ್ಞಾನ ಕ್ಷೇತ್ರದ ಅತಿದೊಡ್ಡ ಹೂಡಿಕೆದಾರ ಹಣ ಹೂಡಿಕೆಗೆ ಮುಂದಾಗುತ್ತಿರುವುದು, ರಿಲಯನ್ಸ್‌ ಕಂಪನಿಯು ಭಾರತದ ರಿಟೇಲ್‌ ವಹಿವಾಟುಗಳಲ್ಲಿ ತಂತ್ರಜ್ಞಾನ ಆಧಾರಿತ ಪರಿವರ್ತನೆ ತರಲು ಮುಂದಾಗಿದೆ ಎಂಬ ನಂಬಿಕೆಗೆ ಇಂಬು ನೀಡುವಂತೆ ಇದೆ.

ಭಾರತದ ರಿಟೇಲ್ ಮಾರುಕಟ್ಟೆಯ ಮೇಲೆ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ಕೂಡ ಕಣ್ಣಿಟ್ಟಿವೆ. ಇಲ್ಲಿ ಪಾರಮ್ಯ ಸಾಧಿಸಲು ಅಂಬಾನಿ ಅವರು ಉದ್ದೇಶಿಸಿದ್ದಾರೆ. ಅವರ ಈ ಉದ್ದೇಶಕ್ಕೆ ಈ ಹೂಡಿಕೆಯಿಂದ ನೆರವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.