ನವದೆಹಲಿ: ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ಆದಾಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವವರಿಗೆ ಕೇಂದ್ರ ಸರ್ಕಾರವು ಭಾರಿ ಪೆಟ್ಟು ನೀಡಿದೆ.
2020–21ರ ಹಣಕಾಸು ವರ್ಷದ ಮೊದಲ (ಏಪ್ರಿಲ್–ಜೂನ್) ತ್ರೈಮಾಸಿಕಕ್ಕೆ ಸುಕನ್ಯಾ ಸಮೃದ್ಧಿ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಬಡ್ಡಿ ದರದಲ್ಲಿ ಶೇ 1.4ರವರೆಗೂ ಇಳಿಕೆ ಮಾಡಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರವನ್ನು ಶೇ 1.2ರಷ್ಟು ಕಡಿಮೆ ಮಾಡಲಾಗಿದೆ. ಉಳಿತಾಯ ಠೇವಣಿ ಬಡ್ಡಿ ದರದಲ್ಲಿ (ಶೇ 4) ಬದಲಾವಣೆ ಮಾಡಲಾಗಿಲ್ಲ.
ಬ್ಯಾಂಕ್ ಠೇವಣಿ ದರಗಳಿಗೆ ಅನುಗುಣವಾಗಿ ಎನ್‌ಪಿಎಸ್, ಪಿಪಿಎಫ್ ಒಳಗೊಂಡು ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಕಡಿತ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಇದು ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.