
ಪಿಟಿಐ
ಉಳಿತಾಯ
ನವದೆಹಲಿ: ಪಿಪಿಎಫ್, ಎನ್‌ಎಸ್‌ಸಿ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಜನವರಿ–ಮಾರ್ಚ್ ತ್ರೈಮಾಸಿಕದ ಅವಧಿಗೆ ಯಥಾಸ್ಥಿತಿಯಲ್ಲಿ ಇರಿಸಿದೆ.
ಇದರಿಂದಾಗಿ ಈ ಯೋಜನೆಗಳ ಬಡ್ಡಿ ದರವು ಸತತ ಏಳು ತ್ರೈಮಾಸಿಕಗಳಲ್ಲಿ ಯಥಾಸ್ಥಿತಿಯಲ್ಲಿ ಉಳಿದಂತೆ ಆಗಲಿದೆ. ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಅಡಿ ಶೇ 8.2ರಷ್ಟು, ಮೂರು ವರ್ಷಗಳ ಅವಧಿ ಠೇವಣಿಯು ಶೇ 7.1ರಷ್ಟು, ಪಿಪಿಎಫ್ ಶೇ 7.1ರಷ್ಟು, ಕಿಸಾನ್ ವಿಕಾಸ ಪತ್ರ ಶೇ 7.5ರಷ್ಟು, ಎನ್‌ಎಸ್‌ಸಿ ಶೇ 7.7ರಷ್ಟು, ಮಾಸಿಕ ಆದಾಯ ಯೋಜನೆಯು ಶೇ 7.4ರಷ್ಟು ಬಡ್ಡಿ ನೀಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.