ನವದೆಹಲಿ:ಕಳೆದ ನಾಲ್ಕು ದಿನದಲ್ಲಿ 75 ಸಾವಿರ ವಾಹನಗಳು ಮಾರಾಟವಾಗಿವೆ ಎಂದು ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಗುರುವಾರ ತಿಳಿಸಿದೆ.
ಈ ಮೊದಲು ಪ್ರತಿದಿನ 45 ಸಾವಿರದಷ್ಟು ಗ್ರಾಹಕರು ವಾಹನಗಳ ಬಗ್ಗೆ ವಿಚಾರಿಸುತ್ತಿದ್ದರು. ಈ ಪ್ರಮಾಣ ಈಗ 80 ಸಾವಿರಕ್ಕೆ ಹೆಚ್ಚಳವಾಗಿದೆ. ಪ್ರತಿದಿನ 18 ಸಾವಿರ ವಾಹನಗಳ ಬುಕಿಂಗ್ ಆಗುತ್ತಿವೆ ಎಂದು ಕಂಪನಿಯ ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಹೇಳಿದ್ದಾರೆ.
ಸೆಪ್ಟೆಂಬರ್ 22ರಿಂದ ಜಿಎಸ್‌ಟಿ ಸರಳೀಕರಣವು ಜಾರಿಗೆ ಬಂದಿದ್ದು, ಅಂದಿನಿಂದ ಗುರುವಾರ ಸಂಜೆ ಆರು ಗಂಟೆವರೆಗೆ 75 ಸಾವಿರ ವಾಹನಗಳ ರಿಟೇಲ್ ಮಾರಾಟವಾಗಿವೆ. ವಾಹನಗಳಿಗೆ ಬುಕಿಂಗ್ ಸಹ ಹೆಚ್ಚಳವಾಗಿದೆ. ಕಂಪನಿಯ ಸಣ್ಣ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳಿದ್ದಾರೆ.
Highlights -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.