ADVERTISEMENT

₹46 ಕೋಟಿ ತೆರಿಗೆ: ಶೋಭಾ ಕಂಪನಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 15:17 IST
Last Updated 2 ಏಪ್ರಿಲ್ 2024, 15:17 IST
<div class="paragraphs"><p>ಶೋಭಾ ಕಂಪನಿ</p></div>

ಶೋಭಾ ಕಂಪನಿ

   

(ಚಿತ್ರ ಕೃಪೆ: X/@SobhaLtd )

ನವದೆಹಲಿ: 2016–17 ಮತ್ತು 2022–23ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿ ಒಟ್ಟು ₹46 ಕೋಟಿ ತೆರಿಗೆ ಪಾವತಿಸುವಂತೆ ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಸಂಸ್ಥೆ ಶೋಭಾ ಲಿಮಿಟೆಡ್‌ಗೆ, ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.‌

ADVERTISEMENT

'ಈ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಕಂಪನಿಯು ಸಲ್ಲಿಸಿದ್ದ ಕೆಲವು ವೆಚ್ಚಗಳ ಬಗ್ಗೆ ತೆರಿಗೆ ಇಲಾಖೆಯು ಅನುಮತಿ ನೀಡಿಲ್ಲ. ಹಾಗಾಗಿ, ಬೆಂಗಳೂರು ಕೇಂದ್ರ ವೃತ್ತದ ಉಪ ಆಯುಕ್ತರು ತೆರಿಗೆ ಪಾವತಿಸುವಂತೆ ಆದೇಶ ಹೊರಡಿಸಿದ್ದಾರೆ’ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.

ಈ ಆದೇಶ ಪ್ರಶ್ನಿಸಿ ತೆರಿಗೆ ಇಲಾಖೆಯ ಆಯುಕ್ತರಿಗೆ (ಅಫೀಲು) ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ, ಆದೇಶವು ಕಂಪನಿಯ ಕಾರ್ಯಾಚರಣೆ ಹಾಗೂ ಇತರೆ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.