ADVERTISEMENT

ಎಸ್‌ಎಸ್‌ಕೆ ಬ್ಯಾಂಕ್‌: ₹ 84.13 ಲಕ್ಷ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 11:47 IST
Last Updated 5 ಏಪ್ರಿಲ್ 2019, 11:47 IST

ಹುಬ್ಬಳ್ಳಿ: ಎಸ್‌.ಎಸ್‌.ಕೆ. ಸಹಕಾರ ಬ್ಯಾಂಕ್‌ 2018–19ರ ಆರ್ಥಿಕ ವರ್ಷದಲ್ಲಿ ಒಟ್ಟು ₹ 84.13 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಮುಂಬರುವ ದಿನಗಳಲ್ಲಿ ನಗರದಲ್ಲಿಯೇ ಎರಡು ಹೊಸ ಶಾಖೆಗಳನ್ನು ಆರಂಭಿಸುವ ಯೋಜನೆ ಇದೆ ಎಂದು ಬ್ಯಾಂಕ್‌ನ ಅಧ್ಯಕ್ಷ ವಿಠ್ಠಲ ಪಿ. ಲದವಾ ಹೇಳಿದರು.

ಶುಕ್ರವಾರ ಬ್ಯಾಂಕ್‌ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬ್ಯಾಂಕ್‌ ಒಂಬತ್ತು ದಶಕದ ಇತಿಹಾಸ ಹೊಂದಿದ್ದರೂ, ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿತ್ತು. ಗ್ರಾಹಕ ಸ್ನೇಹಿ ಯೋಜನೆ ರೂಪಿಸಿ ಹೆಚ್ಚು ಷೇರುದಾರರು ಪಾಲ್ಗೊಳ್ಳುವಂತೆ ಮಾಡಿದ್ದರಿಂದ ಬ್ಯಾಂಕ್‌ ಚೇತರಿಸಿಕೊಂಡು ಈಗ ಉತ್ತಮ ವಹಿವಾಟು ನಡೆಸುತ್ತಿದೆ’ ಎಂದರು.

‘ಬ್ಯಾಂಕ್‌ ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಒಟ್ಟು 6,714 ಷೇರುದಾರರು ಇದ್ದಾರೆ. ನಮ್ಮ ಸಮಾಜದ ಜನ ಹೆಚ್ಚಿರುವ ಕಡೆ ಮತ್ತಷ್ಟು ಶಾಖೆ ಆರಂಭಿಸುವ ಯೋಜನೆಯಿದೆ’ ಎಂದರು.

ADVERTISEMENT

ಬ್ಯಾಂಕ್‌ನ ಮ್ಯಾನೇಜರ್‌ ಸುನಿಲ ಹನುಮಸಾಗರ ‘ಸಹಕಾರಿ ಬ್ಯಾಂಕ್‌ನಲ್ಲೂ ಆ್ಯಪ್‌ಗಳ ಮೂಲಕ ಖಾತೆ ನಿರ್ವಹಣೆ, ಹಣ ವರ್ಗಾವಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎರಡು ಸಾವಿರ ಗ್ರಾಹಕರಿಗೆ ಎಟಿಎಂ ಸೌಲಭ್ಯ ನೀಡಿದೆ. ಷೇರುದಾರರಿಗೆ ಶೇ 8ರಷ್ಟು ಡಿವಿಡೆಂಟ್‌ ಕೊಡಲಾಗಿದೆ’ ಎಂದು ತಿಳಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷ ನಾರಾಯಣ ಎಸ್‌. ಜರತಾರಘರ, ನಿರ್ದೇಶಕರಾದ ಅರ್ಜುನ ಡಿ. ಅಥಣ, ದೀಪಕ್ ಪಿ. ಮುಗಜಿಕೊಂಡಿ, ಕೃಷ್ಣ ಸಾ ಎನ್‌. ಕಾಟೀಗರ, ನಾರಾಯಣ ಎನ್‌. ಖೋಡೆ, ರತ್ನಮಾಲಾ ಜೆ. ಬಿದ್ದಿ, ಸರಳಾ, ನಾಮ ನಿರ್ದೇಶಿತ ಸದಸ್ಯರಾದ ಸುರೇಶ ಆರ್‌. ಭಾಂಡಗೆ, ನಿಲೂಸಾ ಕೆ. ದಲಬಂಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.