ADVERTISEMENT

ಷೇರುಪೇಟೆ ಉತ್ಸಾಹ ಉಡುಗಿಸಿದಆರ್‌ಬಿಐನ ಜಿಡಿಪಿ ಅಂದಾಜು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 20:00 IST
Last Updated 7 ಆಗಸ್ಟ್ 2019, 20:00 IST
   

ಮುಂಬೈ (ಪಿಟಿಐ): ಆರ್‌ಬಿಐನ ಬಡ್ಡಿದರ ಕಡಿತದ ನಿರ್ಧಾರವು ಷೇರುಪೇಟೆಗೆ ಚೇತರಿಕೆ ನೀಡಲು ವಿಫಲವಾಗಿದೆ. ವಹಿವಾಟು ಇಳಿಮುಖವಾಗಿಯೇ ಅಂತ್ಯಗೊಂಡಿದೆ.

ಬೇಡಿಕೆ ಮತ್ತು ಹೂಡಿಕೆ ಮಂದಗತಿಯಲ್ಲಿದೆ ಎನ್ನುವ ಕಾರಣ ನೀಡಿರುವ ಆರ್‌ಬಿಐ, ಆರ್ಥಿಕ ವೃದ್ಧಿ ದರದ(ಜಿಡಿಪಿ) ಬೆಳವಣಿಗೆಯ ಅಂದಾಜನ್ನು ಶೇ 7 ರಿಂದ ಶೇ 6.9ಕ್ಕೆ ತಗ್ಗಿಸಿದೆ. ಇದು ಷೇರುಪೇಟೆಯಲ್ಲಿ ನಕಾರಾತ್ಮಕ ಚಲನೆಗೆ ಕಾರಣವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 286 ಅಂಶ ಇಳಿಕೆಯಾಗಿ 36,691 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 93 ಅಂಶ ಇಳಿಕೆಯಾಗಿ 10,855 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಬಡ್ಡಿ ದರ ಸೂಕ್ಷ್ಮತೆಯ ವಾಹನ, ಬ್ಯಾಂಕಿಂಗ್‌, ಹಣಕಾಸು ಮತ್ತು ರಿಯಲ್‌ ಎಸ್ಟೇಟ್‌ ಷೇರುಗಳು ಶೇ 8.2ರವರೆಗೂ ಇಳಿಕೆ ಕಂಡಿವೆ. ದಿನದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ)₹ 2,108 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.