ನವದೆಹಲಿ: 2024–25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್‌ನ ನಿವ್ವಳ ಲಾಭದಲ್ಲಿ ಶೇ 22ರಷ್ಟು ಇಳಿಕೆಯಾಗಿದೆ.
2023–24ರ ಇದೇ ಅವಧಿಯಲ್ಲಿ ₹7,145 ಕೋಟಿ ಲಾಭ ಗಳಿಸಲಾಗಿತ್ತು. ಈ ಬಾರಿ ₹5,578 ಕೋಟಿ ಲಾಭ ಗಳಿಸಲಾಗಿದೆ ಎಂದು ಕಂಪನಿಯು ಬುಧವಾರ ತಿಳಿಸಿದೆ.
ಒಟ್ಟು ವರಮಾನವು ₹1.13 ಲಕ್ಷ ಕೋಟಿಯಾಗಿದೆ. ಹಿಂದಿನ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹1.10 ಲಕ್ಷ ಕೋಟಿ ಆಗಿತ್ತು. ಒಟ್ಟು ವೆಚ್ಚವು ₹1.07 ಲಕ್ಷ ಕೋಟಿಯಾಗಿದೆ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.