ADVERTISEMENT

ಏಪ್ರಿಲ್‌ನಿಂದ ಗುಜರಾತ್‌ನ ಸನಂದ್‌ನಲ್ಲಿ ಕಾರು ತಯಾರಿಕೆಗೆ ಟಾಟಾ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 15:28 IST
Last Updated 22 ಜನವರಿ 2024, 15:28 IST
<div class="paragraphs"><p>ಟಾಟಾ</p></div>

ಟಾಟಾ

   

ನವದೆಹಲಿ: ಗುಜರಾತ್‌ನ ಸನಂದ್ ಘಟಕದಲ್ಲಿ ಏಪ್ರಿಲ್‌ನಿಂದಲೇ ವಿದ್ಯುತ್‌ ಚಾಲಿತ ಕಾರುಗಳ ತಯಾರಿಕೆ ಆರಂಭಿಸುವುದಾಗಿ ಟಾಟಾ ಮೋಟರ್ಸ್ ತಿಳಿಸಿದೆ.

ಕಳೆದ ವರ್ಷದ ಜನವರಿಯಲ್ಲಿ ಫೋರ್ಡ್ ಇಂಡಿಯಾ ಕಂಪನಿಯ ಘಟಕವನ್ನು ₹725.7 ಕೋಟಿಗೆ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ ಸ್ವಾಧೀನಪಡಿಸಿಕೊಂಡಿತ್ತು.

ADVERTISEMENT

ಏಪ್ರಿಲ್‌ನಿಂದ ನೆಕ್ಸಾನ್ ಎಲೆಕ್ಟ್ರಿಕ್‌ ಕಾರು ಸೇರಿದಂತೆ ಇತರೆ ವಾಹನಗಳ ತಯಾರಿಕೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಟಾಟಾ ಮೋಟರ್ಸ್‌ನ ಪ್ಯಾಸೆಂಜರ್‌ ವಾಹನದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ತಿಳಿಸಿದ್ದಾರೆ.

ಕಂಪನಿಯು ಈಗಾಗಲೇ ವಾರ್ಷಿಕ 3 ಲಕ್ಷ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಇದನ್ನು 4.2 ಲಕ್ಷಕ್ಕೆ ಹೆಚ್ಚಿಸುವ ಗುರಿ  ಹೊಂದಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಪ್ರಯಾಣಿಕ ವಾಹನದ ಉದ್ಯಮವು ಶೇ 5ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.