ನವದೆಹಲಿ: ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಆಜೀವ ಉಪಾಧ್ಯಕ್ಷರಾಗಿ ವೇಣು ಶ್ರೀನಿವಾಸನ್ ಮರುನೇಮಕ ಆಗಿದ್ದಾರೆ. ಸರ್ವಾನುಮತದಿಂದ ಶ್ರೀನಿವಾಸನ್ ಅವರನ್ನು ಟಾಟಾ ಟ್ರಸ್ಟ್ಸ್ ಮರುನೇಮಕ ಮಾಡಿದೆ.
ಇದೀಗ ಮೆಹ್ಲಿ ಮಿಸ್ತ್ರಿ ಅವರ ಮರುನೇಮಕದತ್ತ ಎಲ್ಲರ ಚಿತ್ತ ನೆಟ್ಟಿದೆ. ಟ್ರಸ್ಟ್‌ನಲ್ಲಿ ಇತ್ತೀಚೆಗೆ ಉಂಟಾದ ಆಂತರಿಕ ಸಂಘರ್ಷದ ನಡುವೆಯೇ ಈ ನೇಮಕ ನಡೆದಿದೆ.
ಅಕ್ಟೋಬರ್ 23ರಂದು ವೇಣು ಶ್ರೀನಿವಾಸನ್ ಅವರ ಅವಧಿ ಮುಕ್ತಾಯಗೊಳ್ಳುತ್ತಿತ್ತು. ಹೀಗಾಗಿ ಅದಕ್ಕೂ ಮೊದಲೇ ಅವರನ್ನು ನೇಮಕ ಮಾಡಲಾಗಿದೆ.
ಟಿವಿಎಸ್ ಸಮೂಹದ ಗೌರವಾಧ್ಯಕ್ಷ ವೇಣು ಶ್ರೀನಿವಾಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಟಾಟಾ ಟ್ರಸ್ಟ್ಸ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಅಕ್ಟೋಬರ್ 28ರಂದು ಮೆಹ್ಲಿ ಮಿಸ್ತ್ರಿ ಅವರ ಅವಧಿ ಕೊನೆಗೊಳ್ಳಲಿದೆ. ಮಿಸ್ತ್ರಿ ಅವರ ಮರುನೇಮಕದತ್ತ ಇದೀಗ ಎಲ್ಲರ ಗಮನ ಹರಿದಿದೆ. ಮಿಸ್ತ್ರಿ ಅವರ ಅವಧಿ ಮುಂದುವರಿಕೆ ಸ್ವಯಂಚಾಲಿತವಾಗಿ ನಡೆಯುತ್ತದೆಯೇ ಅಥವಾ ಆಜೀವ ಅವಧಿಗೆ ಟ್ರಸ್ಟಿಗಳಿಂದ ಸರ್ವಾನುಮತದ ಅನುಮೋದನೆ ಅಗತ್ಯವಿದೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
2024ರ ಅಕ್ಟೋಬರ್‌ನಲ್ಲಿ ಅಂಗೀಕರಿಸಿದ ನಿರ್ಣಯದ ಅನ್ವಯ, ಟ್ರಸ್ಟಿಗಳ ಅಧಿಕಾರಾವಧಿ ಮುಗಿದ ನಂತರ ಅವರನ್ನು ಆಜೀವ ಅವಧಿಗೆ ಮರುನೇಮಕ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.