ADVERTISEMENT

600 ಕಾರುಗಳಿಗೆ ಟೆಸ್ಲಾ ಕಾರ್ಯಾದೇಶ

ರಾಯಿಟರ್ಸ್
Published 3 ಸೆಪ್ಟೆಂಬರ್ 2025, 0:18 IST
Last Updated 3 ಸೆಪ್ಟೆಂಬರ್ 2025, 0:18 IST
ಟೆಸ್ಲಾ
ಟೆಸ್ಲಾ   

ಬೆಂಗಳೂರು: ಜುಲೈನಿಂದ ಈ ವರೆಗೆ 600ಕ್ಕೂ ಹೆಚ್ಚು ವಿದ್ಯುತ್‌ಚಾಲಿತ ಕಾರುಗಳಿಗೆ ಟೆಸ್ಲಾ ಕಂಪನಿ ಕಾರ್ಯಾದೇಶ ಪಡೆದುಕೊಂಡಿದೆ ಎಂದು ಬ್ಲೂಮ್‌ಬರ್ಗ್‌ ನ್ಯೂಸ್‌ ವರದಿ ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ. 

ಆದರೆ, ಕಂಪನಿ ನಿರೀಕ್ಷಿಸಿದಕ್ಕಿಂತಲೂ ಇದು ಕಡಿಮೆ ಎಂದು ಹೇಳಿದೆ. ಜುಲೈ ಮಧ್ಯಭಾಗದಲ್ಲಿ ಉದ್ಯಮಿ ಇಲಾನ್‌ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. 

ಪ್ರಸಕ್ತ ವರ್ಷದಲ್ಲಿ 350ರಿಂದ 500 ಕಾರುಗಳನ್ನು ಭಾರತಕ್ಕೆ ರವಾನೆ ಮಾಡಲು ಟೆಸ್ಲಾ ಯೋಜಿಸಿದೆ. ಅದರಲ್ಲಿ ಮೊದಲ ಬ್ಯಾಚ್‌ ಸೆಪ್ಟೆಂಬರ್‌ ಆರಂಭದಲ್ಲಿ ಶಾಂಘೈನಿಂದ ಬರಲಿವೆ. ಮುಂಬೈ, ದೆಹಲಿ, ಪುಣೆ ಮತ್ತು ಗುರುಗ್ರಾಮದಲ್ಲಿ ಆರಂಭಿಕವಾಗಿ ವಾಹನಗಳನ್ನು ವಿತರಿಸಲಿದೆ ಎಂದು ಹೇಳಿದೆ. 

ADVERTISEMENT

ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾದ ಟೆಸ್ಲಾದ ‘ಮಾಡೆಲ್‌ ವೈ’ ಕಾರಿನ ಬೆಲೆ ₹61.67 ಲಕ್ಷವಾಗಿದೆ. ಇದು ಆಮದು ಮಾಡಿಕೊಂಡ ವಿದ್ಯುತ್‌ಚಾಲಿತ ವಾಹನಗಳ ಮೇಲೆ ದೇಶದ ಅತ್ಯಧಿಕ ತೆರಿಗೆ ಹೇರಿಕೆಯನ್ನು ಸೂಚಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.