ಟೆಸ್ಲಾ 3 ಮಾದರಿಯ ಬಿಡುಗಡೆಯಲ್ಲಿ ಇಲಾನ್ ಮಸ್ಕ್
ರಾಯಿಟರ್ಸ್ ಚಿತ್ರ
ಮುಂಬೈ: ವಿದ್ಯುತ್ ಚಾಲಿತ ವಾಹನಗಳ ತಯಾರಿಸುವ ಟೆಸ್ಲಾ ಕಂಪನಿ ತನ್ನ ಕಾರುಗಳ ಮಾರಾಟವನ್ನು ಭಾರತದಲ್ಲಿ ಆರಂಭಿಸುವ ಅಂತಿಮ ಹಂತ ತಲುಪಿದೆ.
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಜುಲೈ 15ರಂದು ಟೆಸ್ಲಾ ತನ್ನ ಮೊದಲ ಮಳಿಗೆಯನ್ನು ಭಾರತದಲ್ಲಿ ಆರಂಭಿಸಲಿದೆ. ಇದನ್ನು ‘ಅನುಭವ ಕೇಂದ್ರ’ ಎಂದು ಕರೆಯಲಾಗಿದೆ.
ಭಾರತದಲ್ಲಿ ಟೆಸ್ಲಾ ಕಾರುಗಳ ಮಾರಾಟಕ್ಕಾಗಿ ಮುಂಬೈನಲ್ಲಿ ತನ್ನ ಮೊದಲ ಮಳಿಗೆಗಾಗಿ ಕಟ್ಟಡವೊಂದರ ಬಾಡಿಗೆ ಪಡೆಯಲು ಇಲಾನ್ ಮಸ್ಕ್ ಕಂಪನಿ ಸಹಿ ಹಾಕಿದ್ದು ಕಳೆದ ಮಾರ್ಚ್‌ನಲ್ಲಿ ಸುದ್ದಿಯಾಗಿತ್ತು. ಟೆಸ್ಲಾ ಕಾರು ಭಾರತಕ್ಕೆ ಬರುವುದು ಖಾತ್ರಿಯಾದರೂ ಅದು ಎಂದು ಎಂಬ ಪ್ರಶ್ನೆ ಕಾರು ಪ್ರಿಯರಲ್ಲಿತ್ತು. ಅದಕ್ಕೆ ಈಗ ತೆರೆ ಬಿದ್ದಿದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಪ್ರವೇಶ ಪಡೆದ ಟೆಸ್ಲಾ, ತನ್ನ ಮುಂದಿನ ಮಳಿಗೆಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭಿಸುವ ಯೋಜನೆ ಹೊಂದಿದೆ ಎಂದೆನ್ನಲಾಗಿದೆ. ಮಳಿಗೆಗಾಗಿ ಹುಡುಕಾಟ, ನೇಮಕಾತಿಯನ್ನು ಕಂಪನಿ ಆರಂಭಿಸಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ‘ಮಾಡೆಲ್ 3’ ಮತ್ತು ‘ಮಾಡೆಲ್ ವೈ’ ಅನ್ನು ಭಾರತದಲ್ಲಿ ಪರಿಚಯಿಸುವ ಸಾಧ್ಯತೆಗಳಿವೆ. ಇವುಗಳ ಬೆಲೆ ₹60 ಲಕ್ಷದಿಂದ ₹70 ಲಕ್ಷ ಎಂದೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.