ADVERTISEMENT

₹2,000 ಮೀರಿದ UPI ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆಯೇ?

₹2,000 ಮೀರಿದ ಯುಪಿಐ ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಕೆಲ ವರದಿಗಳು ಅನೇಕ ಕಡೆ ಪ್ರಸಾರವಾಗಿದ್ದವು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2025, 16:01 IST
Last Updated 18 ಏಪ್ರಿಲ್ 2025, 16:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ₹2,000 ಮೀರಿದ ಯುಪಿಐ ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಕೆಲ ವರದಿಗಳು ಅನೇಕ ಕಡೆ ಪ್ರಸಾರವಾಗಿದ್ದವು.

ಆದರೆ, ಈ ವರದಿಗಳನ್ನು ಕೇಂದ್ರ ಹಣಕಾಸು ಇಲಾಖೆ ತಳ್ಳಿಹಾಕಿದೆ. ಅಂತಹ ಯಾವುದೇ ಪ್ರಸ್ತಾವನೆಗಳು ನಮ್ಮ ಮುಂದೆ ಇಲ್ಲ ಎಂದು ಹೇಳಿದೆ.

ಈ ಕುರಿತು ಕೇಂದ್ರ ಹಣಕಾಸು ಇಲಾಖೆ ಪಿಐಬಿ ಮೂಲಕ ಮಾಹಿತಿ ಹಂಚಿಕೊಂಡಿದ್ದು, ‘ಕೇಂದ್ರ ಸರ್ಕಾರ ಇನ್ಮುಂದೆ ₹2000 ಮೀರಿದ ಯುಪಿಐ ವಹಿವಾಟುಗಳಿಗೆ ಜಿಎಸ್‌ಟಿ ವಿಧಿಸುತ್ತದೆ ಎಂದು ಕೆಲ ವರದಿಗಳು ಹೇಳಿವೆ. ಇದು ಸಂಪೂರ್ಣ ಸುಳ್ಳು. ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವಗಳು ಇಲಾಖೆಯ ಮುಂದೆ ಇಲ್ಲ‘ ಎಂದು ತಿಳಿಸಿದೆ.

ADVERTISEMENT

‘ಈ ಮೊದಲು ಯುಪಿಐ ಮೂಲಕ ವ್ಯಾಪಾರಿಗಳು ಎಂಡಿಆರ್ (Merchant Discount Rate) ನೀಡುವಾಗ ಅದಕ್ಕೆ ಜಿಎಸ್‌ಟಿ ವಿಧಿಸಲಾಗುತ್ತಿತ್ತು. 2020 ರಲ್ಲಿ ಅದನ್ನೂ ತೆಗೆದುಹಾಕಲಾಗಿದೆ. ಹೀಗಾಗಿ ಯುಪಿಐ ವಹಿವಾಟುಗಳಿಗೆ ಯಾವುದೇ ಜಿಎಸ್‌ಟಿ ಇರುವುದಿಲ್ಲ’ ಎಂದು ಹೇಳಿದೆ.

‘ಯುಪಿಐ ವಹಿವಾಟುಗಳಿಗೆ ಉತ್ತೇಜನ ನೀಡುವ ಮೂಲಕ ಡಿಜಿಟಲ್ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸುವುದೇ ಆಗಿದೆ. ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ’ ಎಂದು ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.