ನವದೆಹಲಿ: ‘ರಾಜ್‌ಮಾರ್ಗ್‌ಯಾತ್ರಾ’ ಆ್ಯಪ್ ಮೂಲಕ ತಮ್ಮ ಪ್ರೀತಿಪಾತ್ರರಿಗೆ ವಾರ್ಷಿಕ ಫಾಸ್ಟ್‌ಟ್ಯಾಗ್ ಉಡುಗೊರೆಯಾಗಿ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶನಿವಾರ ತಿಳಿಸಿದೆ.
ದೀಪಾವಳಿ ಅಂಗವಾಗಿ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಫಾಸ್ಟ್‌ಟ್ಯಾಗ್ ನೀಡಲು ಈ ಅವಕಾಶ ಜಾರಿಗೆ ತಂದಿದೆ.
ರಾಜ್‌ಮಾರ್ಗ್‌ಯಾತ್ರಾ ಆ್ಯಪ್‌ನಲ್ಲಿರುವ ಪಾಸ್ ಸೇರ್ಪಡೆ (ಆ್ಯಡ್ ಪಾಸ್) ಆಯ್ಕೆ ಕ್ಲಿಕ್ ಮಾಡಬೇಕು. ಯಾವ ವ್ಯಕ್ತಿಗೆ ವಾರ್ಷಿಕ ಫಾಸ್ಟ್‌ಟ್ಯಾಗ್ ಅನ್ನು ಉಡುಗೊರೆಯಾಗಿ ನೀಡಬೇಕಿದೆಯೋ ಆ ವ್ಯಕ್ತಿ ಬಳಸುವ ವಾಹನದ ಸಂಖ್ಯೆ, ಸಂಪರ್ಕ ವಿವರವನ್ನು ನಮೂದಿಸಬೇಕು. ಒಟಿಪಿ ಪರಿಶೀಲನೆ ಬಳಿಕ ಈ ಫಾಸ್ಟ್‌ಟ್ಯಾಗ್ ಸಕ್ರಿಯ ಆಗಲಿದೆ ಎಂದು ತಿಳಿಸಿದೆ.
ಈ ವಾರ್ಷಿಕ ಪಾಸ್‌ನ ಮೌಲ್ಯ ₹3 ಸಾವಿರ. ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ವೇಗಳನ್ನು ಬಳಸುವ ವಾಣಿಜ್ಯೇತರ ವಾಹನಗಳು (ಖಾಸಗಿ ಕಾರು, ಜೀಪ್, ವ್ಯಾನ್‌ಗಳು) 200 ಟ್ರಿಪ್‌ಗಳವರೆಗೆ ಈ ಪಾಸ್ ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.