ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಟಾಟಾ ಸಮೂಹದ ಟ್ರೆಂಟ್ ಲಿಮಿಟೆಡ್‌ನ ವರಮಾನದಲ್ಲಿ ಶೇ 19.7ರಷ್ಟು ಹೆಚ್ಚಳವಾಗಿದೆ.
2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹4,228 ಕೋಟಿ ವರಮಾನ ಗಳಿಸಿತ್ತು. ಈ ಬಾರಿ ₹5,061 ಕೋಟಿ ಗಳಿಸಿದೆ ಎಂದು ಕಂಪನಿ ಷೇರುಪೇಟೆಗೆ ಶುಕ್ರವಾರ ತಿಳಿಸಿದೆ.
ಕಂಪನಿಯು, ವೆಸ್ಟ್‌ಸೈಡ್, ಜುಡಿಯೊ ಮತ್ತು ಸ್ಟಾರ್‌ನಂತಹ ಬ್ರ್ಯಾಂಡ್ ಹೆಸರಿನಲ್ಲಿ ರಿಟೇಲ್ ಮಳಿಗೆಗಳನ್ನು ನಡೆಸುತ್ತಿದೆ. ಪ್ರಸಕ್ತ ವರ್ಷದ ಜೂನ್ 30ರ ವೇಳೆಗೆ ಕಂಪನಿಯು 248 ವೆಸ್ಟ್‌ಸೈಡ್, 766 ಜುಡಿಯೊ ಮತ್ತು 29 ಇತರೆ ಮಳಿಗೆಗಳನ್ನು ಹೊಂದಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.