ADVERTISEMENT

ರಿಲಯನ್ಸ್‌ ಹಿಂದಿಕ್ಕಿದ ಟಿಸಿಎಸ್‌

ಪಿಟಿಐ
Published 25 ಜುಲೈ 2019, 19:50 IST
Last Updated 25 ಜುಲೈ 2019, 19:50 IST
   

ನವದೆಹಲಿ: ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಕಂಪನಿಯು, ಗುರುವಾರದ ಷೇರುಪೇಟೆ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಮೊದಲ ಸ್ಥಾನಕ್ಕೇರಿದೆ.

ದಿನದ ವಹಿವಾಟಿನ ಅಂತ್ಯದಲ್ಲಿ ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹ 7,98,620 ಕೋಟಿಗೆ ತಲುಪಿದೆ. ಇದು, ರಿಲಯನ್ಸ್‌ ಇಂಡಸ್ಟ್ರೀಸ್‌ಗಿಂತಲೂ (ಆರ್‌ಐಎಲ್‌) ₹ 17,456 ಕೋಟಿ ಹೆಚ್ಚಾಗಿದೆ. ಇದರಿಂದ ರಿಲಯನ್ಸ್‌ ಎರಡನೇ ಸ್ಥಾನಕ್ಕೆ ಇಳಿದಿದೆ. ಮಾರುಕಟ್ಟೆ ಮೌಲ್ಯ ₹ 7,81,164 ಕೋಟಿ ಇದೆ.

ಟಿಸಿಎಸ್‌ ಷೇರುಗಳು ಶೇ 1.51ರಷ್ಟು ಏರಿಕೆ ಕಂಡು ಪ್ರತಿ ಷೇರಿನ ಬೆಲೆ₹ 2,128ಕ್ಕೆ ತಲುಪಿತು.

ADVERTISEMENT

ರಿಲಯನ್ಸ್‌ ಷೇರುಗಳುಶೇ 2.11ರಷ್ಟು ಇಳಿಕೆಯಾಗಿ ಪ್ರತಿ ಷೇರಿನ ಬೆಲೆ ₹ 1,232ಕ್ಕೆ ಇಳಿಕೆಯಾಯಿತು.

ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಡಿಎಫ್‌ಸಿ ಮತ್ತು ಎಚ್‌ಯುಎಲ್‌ ಪ್ರಮುಖ ಐದು ಕಂಪನಿಗಳ ಸಾಲಿನಲ್ಲಿ ಇವೆ.

ಪ್ರತಿ ದಿನದ ವಹಿವಾಟಿನ ಷೇರಿನ ಬೆಲೆಯಲ್ಲಿ ಆಗುವ ಏರಿಳಿತದ ಆಧಾರದ ಮೇಲೆ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿಯೂ ಬದಲಾವಣೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.