ADVERTISEMENT

ದ್ವಿಚಕ್ರ ವಾಹನ ಉದ್ಯಮ ಶೇ 9ರಷ್ಟು ಬೆಳವಣಿಗೆ ನಿರೀಕ್ಷೆ: ಕೆ.ಎನ್‌.ರಾಧಾಕೃಷ್ಣನ್‌

ಪಿಟಿಐ
Published 22 ಫೆಬ್ರುವರಿ 2026, 20:20 IST
Last Updated 22 ಫೆಬ್ರುವರಿ 2026, 20:20 IST
   

ನವದೆಹಲಿ: ‘ದೀರ್ಘಾವಧಿಯಲ್ಲಿ ದ್ವಿಚಕ್ರ ವಾಹನ ಉದ್ಯಮದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್‌) ಶೇ 8ರಿಂದ ಶೇ 9ರಷ್ಟು ಆಗುವ ನಿರೀಕ್ಷೆ ಇದೆ’ ಎಂದು ಟಿವಿಎಸ್ ಮೋಟರ್ ಕಂಪನಿಯ ಸಿಇಒ ಕೆ.ಎನ್‌.ರಾಧಾಕೃಷ್ಣನ್‌ ತಿಳಿಸಿದ್ದಾರೆ.

ಜಿಎಸ್‌ಟಿ ದರ ಪರಿಷ್ಕರಣೆ, ಮೂಲಸೌಕರ್ಯ ವಲಯದ ಮೇಲೆ ಸರ್ಕಾರದ ಬಂಡವಾಳ ವೆಚ್ಚ ಮತ್ತು ಜಿಡಿಪಿ ಬೆಳವಣಿಗೆಯು ವಾಹನಗಳ ಮಾರಾಟದ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ಮುಂದಿನ ಆರ್ಥಿಕ ವರ್ಷದ ಮೊದಲಾರ್ಧದಲ್ಲಿಯೂ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) ಜಿಎಸ್‌ಟಿ ಇಳಿಕೆಯ ಕಾರಣದಿಂದಾಗಿ ದ್ವಿಚಕ್ರ ವಾಹನಗಳ ಮಾರಾಟವು ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ಉದ್ಯಮಕ್ಕೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ನಾಲ್ಕನೇ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಉದ್ಯಮದ ಬೆಳವಣಿಗೆ ಶೇ 15ಕ್ಕಿಂತ ಹೆಚ್ಚಾಗಬಹುದು ಎಂಬ ವಿಶ್ವಾಸವಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಉದ್ಯಮದ ಬೆಳವಣಿಗೆ ಶೇ 2ರಷ್ಟು ಮಾತ್ರವಿತ್ತು. ಇಡೀ ವರ್ಷದ ಕೆಲವೆಡೆ ಸುಮಾರು ಶೇ 9ರಷ್ಟು ಬೆಳವಣಿಗೆ ಕಾಣಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.