ADVERTISEMENT

Invest Karnataka: ಟಿವಿಎಸ್ ಮೋಟಾರ್‌ನಿಂದ ಕರ್ನಾಟಕದಲ್ಲಿ ₹ 2,000 ಕೋಟಿ ಹೂಡಿಕೆ

ಪಿಟಿಐ
Published 12 ಫೆಬ್ರುವರಿ 2025, 5:48 IST
Last Updated 12 ಫೆಬ್ರುವರಿ 2025, 5:48 IST
   

ಬೆಂಗಳೂರು: ಟಿವಿಎಸ್‌ ಮೋಟಾರ್‌ ಕಂಪನಿಯು, ಕರ್ನಾಟಕದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹ 2,000 ಕೋಟಿ ಹೂಡಿಕೆ ಮಾಡಲಿದೆ.

ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನುಸಾರವಾಗಿ, ಕಂಪನಿಯು ಮೈಸೂರಿನಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು ತೆರೆಯಲಿದ್ದು, ಉತ್ಪಾದನೆ ಹಾಗೂ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ. ಪರೀಕ್ಷಾ ಟ್ರ್ಯಾಕ್‌ ಅನ್ನೂ ನಿರ್ಮಿಸಲಿದ್ದು, ರಾಜ್ಯದಲ್ಲಿ ಹೊಸ ಕೇಂದ್ರಗಳನ್ನು ತೆರೆಯಲು ಮೂಲ ಸೌಕರ್ಯ ಅಭಿವೃದ್ಧಿಪಡಿಸಲಿದೆ.

ಟಿವಿಎಸ್‌ ಮೋಟಾರ್‌ನ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್‌ ವೇಣು ಅವರು, 'ಇನ್ವೆಸ್ಟ್‌ ಕರ್ನಾಟಕ 2025' ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕಂಪನಿಯ ಯೋಜನೆಗಳನ್ನು ವಿವರಿಸಿದ್ದಾರೆ. ರಾಜ್ಯದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಕಂಪನಿ ಉತ್ಸುಕವಾಗಿದೆ ಎಂದಿದ್ದಾರೆ.

ADVERTISEMENT

ವಿಶ್ವದ ನಾಲ್ಕನೇ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಿರುವ ಟಿವಿಎಸ್‌ ಮೋಟಾರ್‌, 5.8 ಕೋಟಿ ಗ್ರಾಹಕರನ್ನು ಹೊಂದಿದೆ. ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ವೇಣು ಉಲ್ಲೇಖಿಸಿದ್ದಾರೆ.

ಟಿವಿಎಸ್‌ ಮೋಟಾರ್‌ನ ಉತ್ಪಾದನಾ ಘಟಕ ಮೈಸೂರಿನಲ್ಲಿದೆ. ವಾರ್ಷಿಕ, 15 ಲಕ್ಷಕ್ಕೂ ಅಧಿಕ ವಾಹನ ತಯಾರಿಸುವ ಸಾಮರ್ಥ್ಯ ಹೊಂದಿದ್ದು, 3,500 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ.

ಕಂಪನಿಯ ಒಟ್ಟಾರೆ ಆದಾಯದಲ್ಲಿ, ರಫ್ತು ಮೂಲದಿಂದಲೇ ₹ 1,200 ಕೋಟಿಯಷ್ಟು ಬರುತ್ತದೆ.

ಬೆಂಗಳೂರು ಹೊರವಲಯದ ಹೊಸೂರು ಹಾಗೂ ಹಿಮಾಚಲ ಪ್ರದೇಶದ ನಲಗಢದಲ್ಲಿಯೂ ಟಿವಿಎಸ್‌ ಮೋಟಾರ್‌ನ ತಯಾರಿಕಾ ಕೇಂದ್ರಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.