ADVERTISEMENT

‘ವಿಜಯ್ ಮಲ್ಯ ದಿವಾಳಿ’ ಎಂದು ಘೋಷಿಸಿದ ಬ್ರಿಟನ್ ನ್ಯಾಯಾಲಯ

ಪಿಟಿಐ
Published 26 ಜುಲೈ 2021, 16:22 IST
Last Updated 26 ಜುಲೈ 2021, 16:22 IST
ವಿಜಯ್ ಮಲ್ಯ
ವಿಜಯ್ ಮಲ್ಯ   

ಲಂಡನ್: ಉದ್ಯಮಿ ವಿಜಯ್ ಮಲ್ಯ ಅವರು ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಘೋಷಿಸಿದೆ. ಇದು, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ತನಗೆ ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ವಸೂಲು ಮಾಡಲು ವಿಶ್ವದಾದ್ಯಂತ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಮುಂದಡಿ ಇರಿಸಲು ನೆರವಾಗಲಿದೆ.

ಮಲ್ಯ ಅವರು ಬ್ರಿಟನ್ನಿನಲ್ಲಿ ಇದ್ದಾರೆ. ‘ಮಲ್ಯ ಅವರು ಸಾಲವನ್ನು ಅರ್ಜಿದಾರರಿಗೆ (ಬ್ಯಾಂಕ್‌ಗಳ ಒಕ್ಕೂಟ) ಪೂರ್ತಿಯಾಗಿ, ನಿಗದಿತ ಅವಧಿಯೊಳಗೆ ಹಿಂದಿರುಗಿಸುತ್ತಾರೆ ಎಂದು ಹೇಳಲು ಸಾಕಷ್ಟು ಆಧಾರಗಳಿಲ್ಲ’ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.

‘ದಿವಾಳಿ’ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಲು ಅವಕಾಶ ಕೊಡಬೇಕು ಎಂಬ ಅರ್ಜಿಯನ್ನು ಮಲ್ಯ ಅವರು ಸಲ್ಲಿಸಿದರು. ಆದರೆ, ಮೇಲ್ಮನವಿಯು ಯಶಸ್ಸು ಕಾಣುವ ಸಾಧ್ಯತೆ ಇಲ್ಲ ಎಂದು ನ್ಯಾಯಾಧೀಶರು ಈ ಅರ್ಜಿಯನ್ನು ತಿರಸ್ಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.