ADVERTISEMENT

‘ಅನಿಶ್ಚಿತತೆ ಸೃಷ್ಟಿಸಿದ ತೈಲ ಬೆಲೆ ಏರಿಕೆ’

​ಪ್ರಜಾವಾಣಿ ವಾರ್ತೆ
Published 31 ಮೇ 2022, 20:24 IST
Last Updated 31 ಮೇ 2022, 20:24 IST

ನವದೆಹಲಿ: ‘ಜಿಡಿಪಿ ಬೆಳವಣಿಗೆಯ ಅಂಕಿ–ಅಂಶಗಳು ಬಹುತೇಕ ನಿರೀಕ್ಷೆಗೆ ಅನುಗುಣವಾಗಿ ಇವೆ. ಆದರೆ, ಕಚ್ಚಾ ತೈಲ ಬೆಲೆ ಏರುತ್ತಿರುವ ಕಾರಣ, ಮುಂದಿನ ದಿನಗಳಿಗೆ ಸಂಬಂಧಿಸಿದ ಅಂದಾಜಿನ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ’ ಎಂದು ಕೋಟಕ್ ಮಹೀಂದ್ರ ಬ್ಯಾಂಕ್‌ನ ಅರ್ಥಶಾಸ್ತ್ರಜ್ಞೆ ಉಪಾಸನಾ ಭಾರದ್ವಾಜ್ ಹೇಳಿದ್ದಾರೆ.

ಸರ್ಕಾರದ ಕಡೆಯಿಂದ ವೆಚ್ಚವನ್ನು ಹೆಚ್ಚು ಮಾಡಲು ಅವಕಾಶ ಜಾಸ್ತಿ ಇಲ್ಲದಿರುವುದು, ಖರ್ಚುಗಳು ಹೆಚ್ಚಾಗಿರುವುದರಿಂದಾಗಿ ಕಾರ್ಪೊರೇಟ್ ಕಂಪನಿಗಳ ಲಾಭಾಂಶವು ತಗ್ಗಿರುವುದು ಮತ್ತು ಜಾಗತಿಕ ಮಟ್ಟದಲ್ಲಿ ಬೇಡಿಕೆಯು ತಗ್ಗಿರುವುದು ಕಳವಳ ಮೂಡಿಸುವಂಥದ್ದು ಎಂದು ಅವರು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಂಡುಬಂದಿರುವ ಕೆಲವು ಬಿಕ್ಕಟ್ಟುಗಳು ತಿಳಿಯಾದ ನಂತರದಲ್ಲಿ ಖಾಸಗಿ ವಲಯದಿಂದ ದೊಡ್ಡ ಮಟ್ಟದಲ್ಲಿ ಚಟುವಟಿಕೆಗಳು ಶುರುವಾಗುವ ನಿರೀಕ್ಷೆ ಇದೆ. ಬೆಳವಣಿಗೆ, ಹಣದುಬ್ಬರ ಹಾಗೂ ಹಣಕಾಸಿನ ಸಮತೋಲನವನ್ನು ನಿಭಾಯಿಸುವುದು ಯಾವುದೇ ಅರ್ಥ ವ್ಯವಸ್ಥೆಗೆ ಸವಾಲಿನ ಕೆಲಸ ಎಂದು ಕೇಂದ್ರ ಸರ್ಕಾರ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.