ಮುಂಬೈ: ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು (ಯುಬಿಐ) ಹೊಸದಾಗಿ ‘ಯೂನಿಯನ್ ವೆಲ್‌ನೆಸ್ ಡೆಪಾಸಿಟ್’ ಹೆಸರಿನ ಅವಧಿ ಠೇವಣಿ ಯೋಜನೆಯನ್ನು ಆರಂಭಿಸಿದೆ.
ಈ ಠೇವಣಿ ಜೊತೆಗೆ ಆರೋಗ್ಯ ವಿಮೆ ಸೌಲಭ್ಯವೂ ಗ್ರಾಹಕರಿಗೆ ದೊರೆಯಲಿದೆ. 375 ದಿನಗಳ ಅವಧಿಯ ಠೇವಣಿ ಇದಾಗಿದೆ. ಕನಿಷ್ಠ ಠೇವಣಿ ಮೊತ್ತ ₹10 ಲಕ್ಷ ಆಗಿದ್ದು, ಶೇ 6.75ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
18ರಿಂದ 75 ವರ್ಷದ ಒಳಗಿನವರು ಈ ಠೇವಣಿ ಖಾತೆ ತೆರೆಯಬಹುದಾಗಿದೆ ಎಂದು ತಿಳಿಸಿದೆ.
ಇತ್ತೀಚೆಗೆ ಬ್ಯಾಂಕ್‌ಗಳು ಠೇವಣಿ ಸಂಗ್ರಹಕ್ಕೆ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಠೇವಣಿ ಸಂಗ್ರಹಿಸುವ ಉದ್ದೇಶದಿಂದಲೇ ಯೂನಿಯನ್ ಬ್ಯಾಂಕ್ ಈ ಹೊಸ ಯೋಜನೆಯನ್ನು ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.