ADVERTISEMENT

ಪ್ರತ್ಯೇಕ ಕೋವಿಡ್‌ ಬಜೆಟ್‌ | ಅಮೆರಿಕ– ಭಾರತ ವ್ಯಾಪಾರ ಮಂಡಳಿ ಸಲಹೆ

ಪಿಟಿಐ
Published 26 ಏಪ್ರಿಲ್ 2020, 19:30 IST
Last Updated 26 ಏಪ್ರಿಲ್ 2020, 19:30 IST
   

ನವದೆಹಲಿ: ಭಾರತದ ಆರ್ಥಿಕತೆ ಮೇಲೆ ಕೋವಿಡ್‌ ಪಿಡುಗು ಉಂಟು ಮಾಡಿರುವ ನಷ್ಟ ಎದುರಿಸಲು ಬೇಕಾದ ಹಣಕಾಸು ಅಗತ್ಯಗಳಿಗಾಗಿ ಪ್ರತ್ಯೇಕ ಬಜೆಟ್‌ ಮಂಡಿಸಬೇಕು ಎಂದು ಅಮೆರಿಕ – ಭಾರತ ವ್ಯಾಪಾರ ಮಂಡಳಿಯು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಹೆಚ್ಚುವರಿ ವೆಚ್ಚ ಭರಿಸಲು ಮತ್ತು ಹಣ ಹೊಂದಿಸಲು ಸರ್ಕಾರ ದೇಶಿ ಮಾರುಕಟ್ಟೆಯಲ್ಲಿ ತೆರಿಗೆ ಮುಕ್ತ ‘ಕೋವಿಡ್‌–19 ಬಾಂಡ್‌’ಗಳನ್ನು ಬಿಡುಗಡೆ ಮಾಡಲು ಸೂಚಿಸಲಾಗಿದೆ.

ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅತನು ಚಕ್ರವರ್ತಿ ಅವರಿಗೆ ಮತ್ತು ಆರ್ಥಿಕ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅಧಿಕಾರ ತಂಡಕ್ಕೆ ಸಲ್ಲಿಸಿರುವ ವಿವರವಾದ ವರದಿಯಲ್ಲಿ ಈ ಸಲಹೆಗಳನ್ನು ನೀಡಲಾಗಿದೆ. ವರದಿಯಲ್ಲಿ ತೆರಿಗೆ, ಹಣಕಾಸು ಮತ್ತು ನಿಯಂತ್ರಣ ಕ್ರಮಗಳನ್ನು ಪಟ್ಟಿ ಮಾಡಲಾಗಿದೆ.

ADVERTISEMENT

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸಾಲದ ಬೆಂಬಲ, ಆರೋಗ್ಯ ಕ್ಷೇತ್ರದ ಸಂಸ್ಥೆಗಳಿಗೆ ಹಣಕಾಸು ನೆರವು, ರೈತರ ಆದಾಯ ಹೆಚ್ಚಿಸಲು ಅಲ್ಪಾವಧಿ ಸುಧಾರಣಾ ಕ್ರಮ, ವಿಮಾನಯಾನ ವಲಯಕ್ಕೆ ಅಗತ್ಯ ಬೆಂಬಲ, ಸಾಲ ಹಾಗೂ ಬಡ್ಡಿ ಪಾವತಿ ಪರಿಹಾರ, ಕಸ್ಟಮ್ಸ್‌ ಡ್ಯೂಟಿ ಸುಧಾರಣೆ, ದೇಶಿ ಕೈಗಾರಿಕಾ ವಲಯದ ಸುಸ್ಥಿರತೆಗೆ ವೇತನ ಪಾವತಿ ಮತ್ತು ಉದ್ಯೋಗ ಉಳಿಸಿಕೊಳ್ಳಲು ಕಂಪನಿಗಳಿಗೆ ನೆರವು ಮತ್ತಿತರ ಕ್ರಮಗಳ ಮೂಲಕ ಭಾರತದ ಆರ್ಥಿಕತೆಯು ಪ್ರಗತಿ ಹಾದಿಗೆ ಮರಳಲು ನೆರವಾಗಬೇಕು ಎಂದು ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.