ADVERTISEMENT

ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2022, 10:01 IST
Last Updated 16 ನವೆಂಬರ್ 2022, 10:01 IST
   

ನವದೆಹಲಿ: ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ‘ದೊಡ್ಡ ವೈಫಲ್ಯ‘ ಕಂಡಿದೆ ಎಂದು ‘ಭಾರತ್‌ ಪೇ‘ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶ್ನೀರ್‌ ಗ್ರೋವರ್‌ ಟೀಕೆ ಮಾಡಿದ್ದಾರೆ.

ವಾಟ್ಸ್‌ಆ್ಯಪ್ ಪೇ ಭಾರತದ ಯುಪಿಐ ಮಾರುಕಟ್ಟೆಯನ್ನು ಭೇದಿಸಲು ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಒಂದು ವೇಳೆ ಅದು ಯಶಸ್ವಿಯಾಗಿದ್ದರೆ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಮುಂತಾದವುಗಳನ್ನು ಹಿಂದಿಕ್ಕಬೇಕಿತ್ತು ಎಂದು ‌ಹೇಳಿದ್ದಾರೆ.

‘ಟೆಕ್‌ ಉತ್ಪನ್ನವಾಗಿ ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ಭಾರಿ ದೊಡ್ಡ ವೈಫಲ್ಯ ಕಂಡಿದೆ. ಎಲ್ಲರ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್ ಇದೆ.ವಾಟ್ಸ್‌ಆ್ಯಪ್ನಲ್ಲಿ ಫೋಟೋ ಕಳಿಸಿದಷ್ಟೇ ಸುಲಭವಾಗಿ ಹಣ ಕಳಿಸುವಂತಿದ್ದರೆ, ‌ಅದು ಪೇಟಿಎಂ, ಫೋನ್‌ಪೇ, ಗೂಗಲ್‌ ಪೇ ಅನ್ನು ಹಿಂದಿಕ್ಕಬೇಕಿತ್ತು. ಭಾರತದ ಮ್ಯಾನೇಜರ್‌ಗಳು ಮಾರುಕಟ್ಟೆಯನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅನಗತ್ಯ ತೊಂದರೆಗಳಿಂದ ದೂರ ಇರಿ‘ ಎಂದು ಅವರು ಹೇಳಿದ್ದಾರೆ.

ADVERTISEMENT

ಅಲ್ಲದೇ ವಾಟ್ಸ್‌ಆ್ಯಪ್ ತನ್ನ ಭದ್ರತಾ ಫೀಚರ್‌ ಬಗ್ಗೆ ಪತ್ರಿಕೆಯಲ್ಲಿ ನೀಡಿದ ಜಾಹೀರಾತಿನ ಫೋಟೋವನ್ನು ಟ್ವೀಟ್‌ ಮಾಡಿರುವ ಅವರು, ‘ಭದ್ರಾತಾ ಫೀಚರ್‌ಗಳ ಬಗ್ಗೆ ಮಾಹಿತಿ ನೀಡಲು ಜಾಹೀರಾತಿಗೆ ಬಂಡವಾಳ ಹೂಡಿಕೆ ಮಾಡುವ ಬದಲು, ಪೇಮೆಂಟ್‌ ಸೇವೆ ಇನ್ನಷ್ಟು ಬಲಪಡಿಸುವ ಬಗ್ಗೆ ಗಮನ ಕೊಡಿ‘ ಎಂದು ಸಲಹೆ ನೀಡಿದ್ದಾರೆ.

‘ವಕೀಲರು ಹಾಗೂ ಸಾರ್ವಜನಿಕ ನೀತಿ ನಿರೂಪಣೆ ಮಾಡುವ ಅಂಕಲ್‌ಗಳು ವಾಟ್ಸ್‌ಆ್ಯಪ್‌ ವ್ಯವಹಾರ ನೋಡಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಲು ಸಾಧ್ಯವಿಲ್ಲ‘ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.