ತರಕಾರಿಗಳು
ನವದೆಹಲಿ: ಆಹಾರ ವಸ್ತುಗಳು ಹಾಗೂ ಇಂಧನ ಬೆಲೆ ತಗ್ಗಿದ ಪರಿಣಾಮವಾಗಿ ಸಗಟು ಹಣದುಬ್ಬರ ದರವು ಜೂನ್ ತಿಂಗಳಲ್ಲಿ ಶೇಕಡ 0.13ಕ್ಕೆ ಇಳಿಕೆ ಕಂಡಿದೆ. ಇದು 15 ತಿಂಗಳ ಕನಿಷ್ಠ ಮಟ್ಟ. ಆದರೆ, ಜಾಗತಿಕ ಸಂಘರ್ಷಗಳ ಪರಿಣಾಮವಾಗಿ ಸಗಟು ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಸಗಟು ಹಣದುಬ್ಬರ ಪ್ರಮಾಣವು ಮೇ ತಿಂಗಳಲ್ಲಿ ಶೇ 0.39ರಷ್ಟು ಇತ್ತು. ಕಳೆದ ವರ್ಷದ ಜೂನ್ ತಿಂಗಳಲ್ಲಿ ಇದು ಶೇ 3.43ರಷ್ಟಿತ್ತು.
ತರಕಾರಿ, ಈರುಳ್ಳಿ, ಆಲೂಗಡ್ಡೆಯ ಬೆಲೆ ಇಳಿದಿರುವ ಕಾರಣಕ್ಕೆ ಜೂನ್ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆಯು ಶೇ 3.75ರಷ್ಟು ಇಳಿದಿದೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ. ಮೇ ತಿಂಗಳಲ್ಲಿ ತರಕಾರಿಗಳ ಸಗಟು ಬೆಲೆಯಲ್ಲಿ ಶೇ 1.56ರಷ್ಟು ಇಳಿಕೆ ದಾಖಲಾಗಿತ್ತು.
ಜೂನ್ ತಿಂಗಳಲ್ಲಿ ತರಕಾರಿಗಳ ಸಗಟು ಬೆಲೆಯಲ್ಲಿ ಶೇ. 22.65ರಷ್ಟಿದ್ದು, ಮೇ ತಿಂಗಳಲ್ಲಿ ತರಕಾರಿಗಳ ಸಗಟು ಬೆಲೆಯಲ್ಲಿ ಶೇ 21.62ರಷ್ಟು ಇಳಿಕೆ ದಾಖಲಾಗಿತ್ತು.
ಹಣದುಬ್ಬರವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಆರ್‌ಬಿಐ ಕಳೆದ ತಿಂಗಳು ಬಡ್ಡಿದರಗಳನ್ನು ಶೇ 0.50ರಷ್ಟು ಕಡಿತಗೊಳಿಸಿ ಶೇ 5.50ಕ್ಕೆ ಇಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.