ADVERTISEMENT

ವಿಪ್ರೊ:₹7300 ಕೋಟಿ ಬೆಲೆಯ ಷೇರು ಮಾರಿದ ಪ್ರವರ್ತಕರು

ಮರು ಖರೀದಿಯಲ್ಲಿ 22.46 ಕೋಟಿ ಷೇರು ಮಾರಾಟ

ಪಿಟಿಐ
Published 11 ಸೆಪ್ಟೆಂಬರ್ 2019, 13:41 IST
Last Updated 11 ಸೆಪ್ಟೆಂಬರ್ 2019, 13:41 IST
   

ನವದೆಹಲಿ: ವಿಪ್ರೊ ಸಂಸ್ಥೆಯ ಷೇರುಗಳ ಮರು ಖರೀದಿಯಲ್ಲಿ ಅಜೀಂ ಪ್ರೇಮ್‌ಜಿ ಮತ್ತು ಪ್ರವರ್ತಕ ಸಮೂಹದ ಇತರ ಸಂಸ್ಥೆಗಳು ₹ 7,300 ಕೋಟಿ ಮೊತ್ತದ 22.46 ಕೋಟಿ ಷೇರುಗಳನ್ನು ಮಾರಾಟ ಮಾಡಿವೆ.

ಆಗಸ್ಟ್‌ ತಿಂಗಳಾಂತ್ಯಕ್ಕೆ ಕೊನೆಗೊಂಡ ಈ ಮರುಖರೀದಿ ಪ್ರಕ್ರಿಯೆಯಲ್ಲಿ, ಪ್ರತಿ ಷೇರಿಗೆ ₹ 325ರಂತೆ 32.3 ಕೋಟಿ ಷೇರುಗಳನ್ನು ಮರು ಖರೀದಿಸಲಾಗಿದೆ. ಈ ಉದ್ದೇಶಕ್ಕೆ ₹ 10,499.99 ಕೋಟಿ ನಿಗದಿಪಡಿಸಲಾಗಿತ್ತು ಎಂದು ವಿಪ್ರೊ, ಷೇರುಪೇಟೆಗೆ ಮಾಹಿತಿ ನೀಡಿದೆ.

ಅಜೀಂ ಪ್ರೇಮ್‌ಜಿ ಟ್ರಸ್ಟ್‌ನ 4.05 ಕೋಟಿ ಮತ್ತು ಅಜೀಂ ಪ್ರೇಮ್‌ಜಿ ಅವರ 1.22 ಕೋಟಿ ಷೇರುಗಳನ್ನು ಮರು ಖರೀದಿ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) 1.34 ಕೋಟಿ ಷೇರುಗಳನ್ನು ಮಾರಾಟ ಮಾಡಿದೆ. ಮರು ಖರೀದಿ ನಂತರ ಸಂಸ್ಥೆಯಲ್ಲಿನ ಪ್ರವರ್ತಕರ ಪಾಲು ಶೇ 74.05ರಷ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.