ADVERTISEMENT

ಗ್ರಾಹಕರಿಗೆ ಹತ್ತೇ ನಿಮಿಷದಲ್ಲಿ ಔಷಧ: ‘ಜೆಪ್ಟೊ ಫಾರ್ಮಸಿ’ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 14:08 IST
Last Updated 8 ಆಗಸ್ಟ್ 2025, 14:08 IST
.
.   

ನವದೆಹಲಿ: 10 ನಿಮಿಷದಲ್ಲಿ ಔಷಧಗಳನ್ನು ಗ್ರಾಹಕರಿಗೆ ತಲುಪಿಸುವ ‘ಜೆಪ್ಟೊ ಫಾರ್ಮಸಿ’ ಸೇವೆ ಆರಂಭಿಸಲಾಗಿದೆ ಎಂದು ಆನ್‌ಲೈನ್‌ ವೇದಿಕೆ ‘ಜೆಪ್ಟೊ’ ತಿಳಿಸಿದೆ.  

ಮುಂಬೈ, ಬೆಂಗಳೂರು, ದೆಹಲಿ–ಎನ್‌ಸಿಆರ್ ಮತ್ತು ಹೈದರಾಬಾದ್‌ನಲ್ಲಿ ಪ್ರಸ್ತುತ ಈ ‘ಜೆಪ್ಟೊ ಫಾರ್ಮಸಿ’ ಸೇವೆ ಆರಂಭಿಸಲಾಗಿದೆ ಎಂದು ಜೆಪ್ಟೊ ಸಹ ಸಂಸ್ಥಾಪಕ ಮತ್ತು ಸಿಇಒ ಆದಿತ್ ಪಲಿಚಾ ಲಿಂಕ್ಡ್‌ಇನ್‌ನಲ್ಲಿ ತಿಳಿಸಿದ್ದಾರೆ.

ಈಗಾಗಲೇ ಕಂಪನಿಯು 10 ನಿಮಿಷದಲ್ಲಿ ದಿನಸಿ ವಸ್ತುಗಳನ್ನು ತಲುಪಿಸುತ್ತಿದೆ. ಈಗ ಆಯ್ದ ಮಹಾನಗರಗಳಲ್ಲಿ ಜೆಪ್ಟೊ ಫಾರ್ಮಸಿ ಸೇವೆ ಆರಂಭಿಸಲಾಗಿದ್ದು, ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.