
ಪೌಷ್ಟಿಕ ಆಹಾರ ಉತ್ಪನ್ನಗಳನ್ನು ತಯಾರಿಸುವ ಝೈಡಸ್ ವೆಲ್‌ನೆಸ್ ಕಂಪನಿಯ ಷೇರಿನ ಮೌಲ್ಯ ₹575 ಆಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.
ಕಂಪನಿಯು ₹4 ಸಾವಿರ ಕೋಟಿ ವರಮಾನ ಹೊಂದಿದೆ. ಗ್ಲುಕೋಸ್ ಪುಡಿ, ಚರ್ಮದ ಆರೈಕೆ ಉತ್ಪನ್ನಗಳು, ಆರೋಗ್ಯ ವರ್ಧಕ ಆಹಾರ ಉತ್ಪನ್ನಗಳು, ಪೌಷ್ಟಿಕ ಪೇಯಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುತ್ತದೆ.
ಕಂಪನಿಯು ಇತ್ತೀಚೆಗೆ ‘ನ್ಯಾಚುರೆಲ್’ ಮತ್ತು ‘ಕಂಫರ್ಟ್ ಕ್ಲಿಕ್’ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಇದು ಕಂಪನಿಯ ಉತ್ಪಾದನಾ ವಿಭಾಗವನ್ನು ಬಲಪಡಿಸಲಿದೆ.
ಶುಗರ್ ಫ್ರೀ ಗ್ರೀನ್, ಗ್ಲುಕೋನ್–ಡಿ ಆ್ಯಕ್ಟಿವರ್ಸ್ ಆರ್‌ಟಿಡಿ ಮತ್ತು ಇಮ್ಯುನೊವೋಲ್ಟ್ ಉತ್ಪನ್ನಗಳ ಮೂಲಕ ಕಂಪನಿ ತನ್ನ ಉತ್ಪಾದನಾ ವಿಭಾಗವನ್ನು ವಿಸ್ತರಿಸಿಕೊಳ್ಳುತ್ತಿದ್ದು, ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಂಪನಿಯು 1,950ಕ್ಕೂ ಹೆಚ್ಚು ವಿತರಕರು, 2,800 ಮಾರಾಟಗಾರರು, 25 ಗೋದಾಮುಗಳನ್ನು ಹೊಂದಿದೆ.
ಕಂಪನಿಯ ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ) ಸಂಯುಕ್ತ ವಾರ್ಷಿಕ ಬೆಳವಣಿಗೆ ದರ ಶೇ 14ರಷ್ಟು ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಷೇರಿನ ಬೆಲೆ ₹454 ರಷ್ಟಾಗಿತ್ತು.
(ಬ್ರೋಕರೇಜ್‌ಗಳು ನೀಡುವ ವಿವರ, ಮಾಹಿತಿಗೆ ಕಂಪನಿ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.