ADVERTISEMENT

₹ 38,000 ಗಡಿ ದಾಟಿದ ಹಳದಿ ಲೋಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 7:11 IST
Last Updated 13 ಆಗಸ್ಟ್ 2019, 7:11 IST
   

ನವದೆಹಲಿ: ದೇಶದ ಪ್ರಮುಖ ಚಿನಿವಾರ ಪೇಟೆಗಳ ವಹಿವಾಟಿನಲ್ಲಿ ಬೆಲೆ ಏರಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ ಸೋಮವಾರ 10 ಗ್ರಾಂ.ಗೆ ₹ 38,467ಕ್ಕೆ ತಲುಪಿದೆ.

ಬೆಳ್ಳಿ ಬೆಲೆಯೂ ಭಾರಿ ಏರಿಕೆ ಕಂಡಿದ್ದು,ಒಂದು ಕೆ.ಜಿಗೆ ₹ 1,150 ಹೆಚ್ಚಳವಾಗಿ ₹43,000ಕ್ಕೆ ತಲುಪಿದೆ.ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ 90 ರೂ ಏರಿಕೆಯೊಂದಿಗೆ 10ಗ್ರಾಂ ಚಿನ್ನದ ಬೆಲೆ ₹38,420 ಆಗಿತ್ತು. ಇದೇ ವೇಳೆ ಬೆಳ್ಳಿ ಬೆಲೆ ಕೆ.ಜಿ.ಗೆ ₹ 140 ಏರಿಕೆಯೊಂದಿಗೆ44,150 ತಲುಪಿತ್ತು.

ಇಂದಿನ ಏರಳಿತ
ನಿರಂತರವಾಗಿ ಬೆಲೆ ಏರಿಕೆ–ಇಳಿಕೆ ಕಂಡು ಬರುತ್ತಿದ್ದು,ಸದ್ಯ ಮಂಗಳವಾರ ಮಧ್ಯಾಹ್ನ 12ರ ವೇಳೆಗೆ ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ38,120 ರೂಪಾಯಿ ಆಗಿದೆ ಎಂದು bullions.co.in ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.