ಆರ್‌ಬಿಐ
ಭಾರತದಲ್ಲಿ ಸರ್ಕಾರದ ಬಾಂಡ್‌ಗಳ ಮೇಲಿನ ಹೂಡಿಕೆಯಲ್ಲಿ ಸಣ್ಣ ಹೂಡಿಕೆದಾರರ ಪಾಲು ಹೆಚ್ಚಬೇಕು ಎಂಬ ಉದ್ದೇಶದಿಂದ ಆರ್‌ಬಿಐ ಆರಂಭಿಸಿರುವ ಯೋಜನೆ ‘ಆರ್‌ಬಿಐ ರಿಟೇಲ್ ಡೈರೆಕ್ಟ್’.
ಸಣ್ಣ ಹೂಡಿಕೆದಾರರಿಗೆ ನೆರವಾಗುವ ಉದ್ದೇಶದಿಂದ ಆರ್‌ಬಿಐ, ರಿಟೇಲ್ ಡೈರೆಕ್ಟ್ ಹೆಸರಿನಲ್ಲಿ ಪೋರ್ಟಲ್ ಒಂದನ್ನು ಕೂಡ ತೆರೆದಿದೆ. ಈ ಪೋರ್ಟಲ್‌ಗೆ ಭೇಟಿ ನೀಡಿ, ಅಗತ್ಯ ಮಾಹಿತಿ ಒದಗಿಸಿ ಹೂಡಿಕೆದಾರರು ಖಾತೆ ತೆರೆಯಬಹುದು. ನಂತರ ಸರ್ಕಾರಿ ಬಾಂಡ್‌ಗಳಲ್ಲಿ ಹಣ ತೊಡಗಿಸಬಹುದು. ವಿವಿಧ ರಾಜ್ಯ ಸರ್ಕಾರಗಳು ಹೊರಡಿಸುವ ಬಾಂಡ್‌ಗಳಲ್ಲಿಯೂ ಹಣ ಹೂಡಿಕೆ ಮಾಡಬಹುದು.
https://rbiretaildirect.org.in ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಎಲ್ಲ ಕೆಲಸಗಳನ್ನು ಮಾಡಬಹುದು. ಅಲ್ಲದೆ, ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಅಗತ್ಯವಿರುವ ಆ್ಯಪ್‌ಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್ ಬಳಸಿಯೂ ಖಾತೆ ತೆರೆಯಬಹುದು.
ಈ ಪೋರ್ಟಲ್‌ನಲ್ಲಿ ಇರುವ ಮಾಹಿತಿ ಅನ್ವಯ, ಮೊಬೈಲ್ ದೂರವಾಣಿ ಸಂಖ್ಯೆ, ಪ್ಯಾನ್ ಕಾರ್ಡ್, ವಿಳಾಸದ ದಾಖಲೆ, ಇ–ಮೇಲ್ ವಿಳಾಸ ಮತ್ತು ಬ್ಯಾಂಕ್ ಖಾತೆ ಇದ್ದರೆ ಹೂಡಿಕೆಗೆ ಖಾತೆ ತೆರೆಯಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.