ಹೊಸ ಕಂಪನಿಗಳು, ಹಳೆಯ ಕಂಪನಿಗಳು ಐಪಿಒ ಮೂಲಕ ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ, ಸಾಂಸ್ಥಿಕ ಹೂಡಿಕೆದಾರರಿಗೆ ನೀಡುವ ಭರಾಟೆ ಜೋರಾಗಿ ಇರುವ ಸಂದರ್ಭ ಇದು.
ಈ ಹೊತ್ತಿನಲ್ಲಿ ಹೊಸ ಐಪಿಒಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುವುದಕ್ಕೆಂದೇ ಸಿದ್ಧವಾಗಿರುವ ಆ್ಯಪ್ ‘ಐಪಿಒಜಿ’. ಇದು ಹತ್ತು ಹಲವು ಕಂಪನಿಗಳ ಐಪಿಒ ಯೋಜನೆಗಳ ಬಗ್ಗೆ ತಾಜಾ ಮಾಹಿತಿ ಒದಗಿಸುತ್ತ ಇರುತ್ತದೆ.
ಸದ್ಯ ಯಾವೆಲ್ಲ ಕಂಪನಿಗಳ ಐಪಿಒಗೆ ಅರ್ಜಿ ಸಲ್ಲಿಸಬಹುದು, ಮುಂದೆ ಕೆಲವು ದಿನಗಳಲ್ಲಿ ಯಾವೆಲ್ಲ ಕಂಪನಿಗಳ ಐಪಿಒ ನಿಗದಿಯಾಗಿದೆ ಎಂಬ ಮಾಹಿತಿಯನ್ನು ಇದು ನೀಡುತ್ತದೆ. ದೊಡ್ಡ ಪ್ರಮಾಣದ ಕಂಪನಿಗಳ ಐಪಿಒ ವಿವರ ಮಾತ್ರವೇ ಅಲ್ಲದೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕಂಪನಿಗಳ ಐಪಿಒ ಬಗ್ಗೆಯೂ ಇದರಲ್ಲಿ ಮಾಹಿತಿ ಸಿಗುತ್ತದೆ.
ಅರ್ಜಿ ಸಲ್ಲಿಸಿದವರು ತಮಗೆ ಷೇರುಗಳು ದೊರೆತಿವೆಯೇ ಎಂಬುದನ್ನೂ ಈ ಆ್ಯಪ್ ಮೂಲಕವೇ ಪರಿಶೀಲಿಸಬಹುದು. ಕಂಪನಿಗಳು ಐಪಿಒ ಪ್ರಕ್ರಿಯೆಯ ಭಾಗವಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸುವ ಅಗತ್ಯ ದಾಖಲೆಪತ್ರಗಳನ್ನು ಈ ಆ್ಯಪ್ ಮೂಲಕ ಪಡೆದುಕೊಳ್ಳುವ ಸೌಲಭ್ಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.