ADVERTISEMENT

2023ರ ವೇಳೆಗೆ ಶೇ.6ಕ್ಕೆ ಹಣದುಬ್ಬರ ಇಳಿಕೆ: ಆರ್‌ಬಿಐ

ಪಿಟಿಐ
Published 7 ಡಿಸೆಂಬರ್ 2022, 8:13 IST
Last Updated 7 ಡಿಸೆಂಬರ್ 2022, 8:13 IST
   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದ ವೇಳೆಗೆ ಹಣದುಬ್ಬರ ಶೇ.6ಕ್ಕೆ ಕುಸಿಯಲಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ಅಂದಾಜಿಸಿದೆ.


'ಹೆಚ್ಚುತ್ತಿರುವ ಹಣದುಬ್ಬರದ ಕುರಿತು ತೀವ್ರ ಗಮನಹರಿಸಲಾಗುತ್ತಿದೆ ಮತ್ತು ಬೆಲೆ ಏರಿಕೆ ನಿಯಂತ್ರಣದೊಂದಿಗೆ ಹಣದುಬ್ಬರ ಕೂಡ ನಿಯಂತ್ರಣಕ್ಕೆ ಬರಲಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.


ಕಚ್ಚಾತೈಲ ಸೇರಿದಂತೆ ಜಾಗತಿಕ ಸಗಟು ದರ ಇಳಿಮುಖವಾಗುತ್ತಿದೆ. ಆದರೆ ರಷ್ಯಾ–ಉಕ್ರೇನ್‌ನಂತಹ ದೀರ್ಘಾವಧಿಯ ಭೌಗೋಳಿಕ-ರಾಜಕೀಯ ಹಗೆತನವು ಇದರ ಮೇಲೆ ಪರಿಣಾಮ ಬೀರಬಹುದು.

ADVERTISEMENT


‘ಈ ಎಲ್ಲ ಅಂಶಗಳನ್ನು ಗಮನಿಸಿ ಕಚ್ಚಾ ತೈಲದ ಸರಾಸರಿ ದರ ಬ್ಯಾರಲ್‌ಗೆ 100 ಡಾಲರ್‌ ಇದ್ದರೆ, 2022–23ರಲ್ಲಿ ನಿರೀಕ್ಷಿತ ಹಣದುಬ್ಬರ ಶೇ.6.7. ತೃತೀಯ ತ್ರೈಮಾಸಿಕದಲ್ಲಿ ಶೇ.6.6 ಮತ್ತು ನಾಲ್ಕನೆ ತ್ರೈಮಾಸಿಕದಲ್ಲಿ ಶೇ.5.9 ಎಂದು ಅಂದಾಜಿಸಲಾಗಿದೆ’ ಎಂದು ಆರ್‌ಬಿಐ ಹೇಳಿದೆ. ‌


ಆರ್‌ಬಿಐ, ಹಣದುಬ್ಬರವನ್ನು ಶೇ.4ರ ಆಸುಪಾಸಿನಲ್ಲಿ (+/- 2) ಸ್ಥಿರಗೊಳಿಸುವ ಗುರಿ ಹೊಂದಿದೆ. ರಷ್ಯಾ–ಉಕ್ರೇನ್‌ ಯುದ್ಧದ ಪರಿಣಾಮವಾಗಿ ರೀಟೇಲ್‌ ಹಣದುಬ್ಬರ ಕಳೆದ 10 ತಿಂಗಳಿನಿಂದ ಶೇ.6ಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.