ADVERTISEMENT

ಪ್ರಜಾವಾಣಿ ಸಾಧಕರು 2023 | ನವೋದ್ಯಮಿ: ಮಹಿಳಾ ಸಬಲೀಕರಣಕ್ಕೆ ಮಾದರಿ

ಪ್ರಜಾವಾಣಿ ವಿಶೇಷ
Published 1 ಜನವರಿ 2023, 4:45 IST
Last Updated 1 ಜನವರಿ 2023, 4:45 IST
ಮೇಘನಾ ಜೈನ್‌
ಮೇಘನಾ ಜೈನ್‌   

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****



ಹೆಸರು: ಮೇಘನಾ ಜೈನ್

ADVERTISEMENT

ವೃತ್ತಿ: ನವೋದ್ಯಮಿ

ಸಾಧನೆ: ಕೇಕ್‌ ಕಪ್‌ ತಯಾರಿಯ ಮೂಲಕ ಬ್ರ್ಯಾಂಡ್‌ ಸೃಷ್ಟಿ

ವಿದ್ಯಾರ್ಥಿದೆಸೆಯಲ್ಲೇ ಬೇಕರಿ ಕ್ಷೇತ್ರದತ್ತ ಮೂಡಿದ ಒಲವು, ಈ ಯುವತಿಗೆ ನವೋದ್ಯಮದ ಮಾರ್ಗ ಕಂಡುಕೊಳ್ಳಲು ಸಾಧ್ಯವಾಯಿತು.

ಕೇಕ್‌ ಕಪ್‌ಗಳ ತಯಾರಿಸಿ, ಮಾರಾಟ ಮಾಡುವಲ್ಲಿ ತಮ್ಮದೇ ಆದ ’ಬ್ರ್ಯಾಂಡಿಂಗ್‌’ ಸೃಷ್ಟಿಸಿಕೊಂಡಿರುವ ಬೆಂಗಳೂರಿನ ಮೇಘನಾ ಜೈನ್‌, ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ.

ಹೊಸತನ ಮತ್ತು ವಿಭಿನ್ನ ಮಾದರಿಯ ಕೇಕ್‌ಗಳ ವಹಿವಾಟು ನಡೆಸುತ್ತಿರುವ ಮೇಘನಾ ಜೈನ್‌, ತಮ್ಮ ವ್ಯಾಪಾರ ವಹಿವಾಟಿನ ಜಾಲವನ್ನು ದೇಶದಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಇವರಲ್ಲಿನ ಉದ್ಯೋಗಿಗಳು ಸಹ ಬಹುತೇಕರು ಮಹಿಳೆಯರು. ಪ್ರತಿಯೊಂದು ಕಾರ್ಯದಲ್ಲೂ ಮಹಿಳೆಯರಿಗೆ ಆದ್ಯತೆ. ಪದವಿ ಪಡೆದ ಬಳಿಕ ಮೂರು ತಿಂಗಳು ತರಬೇತಿ ಪಡೆದು, ಸ್ವಂತ ನವೋದ್ಯಮ ಆರಂಭಿಸಬೇಕು ಎನ್ನುವ ಯೋಚನೆ ಮೂಡಿದಾಗ ಹತ್ತಾರು ಪ್ರಶ್ನೆಗಳು, ಸವಾಲುಗಳು ಎದುರಿಸಿದರು. ಯುವತಿಗೆ ಏಕೆ ಉದ್ಯಮ ಎನ್ನುವ ಕಟುವಾದ ಟೀಕೆಗಳಿಗೆ ಸೊಪ್ಪು ಹಾಕಲ್ಲ. ಆತ್ಮಸ್ಥೈರ್ಯ, ಆತ್ಮವಿಶ್ವಾಸದಿಂದ ಸಣ್ಣ ಉದ್ಯಮವನ್ನು ಮೊದಲು ಮನೆಯಿಂದಲೇ ಆರಂಭಿಸಿದರು. ನಂತರ ಜೆ.ಪಿ. ನಗರದಲ್ಲಿ ’ಡ್ರೀಮ್‌ ಎ ಡಜನ್‌’ ಹೆಸರಿನಲ್ಲಿ ಬೇಕರಿ ತೆರೆದರು.

ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಕೇಕ್‌ ಕಪ್‌ಗಳ ವಹಿವಾಟು ನಡೆಸುತ್ತಿರುವ ಮೇಘನಾ ಅವರು ವಿಶ್ವದಾದ್ಯಂತ ವಹಿವಾಟು ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.