ADVERTISEMENT

ಬ್ರೋಕರೇಜ್‌ ಮಾತು: ಐಟಿಸಿ ಹೋಟೆಲ್ಸ್‌ ಲಿಮಿಟೆಡ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 22:30 IST
Last Updated 21 ಜನವರಿ 2026, 22:30 IST
   

ಐಟಿಸಿ ಹೋಟೆಲ್ಸ್‌ ಲಿಮಿಟೆಡ್‌ನ ಷೇರಿನ ಬೆಲೆ ₹235ಕ್ಕೆ ತಲುಪಲಿದೆ ಎಂದು ಬ್ರೋಕರೇಜ್‌ ಸಂಸ್ಥೆ ಜೆ.ಎಂ.ಫೈನಾನ್ಶಿಯಲ್ ಹೇಳಿದೆ.

2024–25ರಿಂದ 2027–28ರವರೆಗೆ ಕಂಪನಿಯ ವರಮಾನದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು (ಸಿಎಜಿಆರ್‌) ಶೇ 11ರಷ್ಟು ಮತ್ತು ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ)
ಶೇ 14ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ಸರಾಸರಿ ಕೊಠಡಿ ಬಾಡಿಗೆ ದರದಲ್ಲಿ (ಎಆರ್‌ಆರ್‌) ಶೇ 9ರಷ್ಟು ಹೆಚ್ಚಳವಾಗಿದೆ ಮತ್ತು ಹೋಟೆಲ್‌ನ ಕೊಠಡಿ ಬಳಕೆ ಪ್ರಮಾಣ
ಶೇ 2.90ರಷ್ಟು ಏರಿಕೆಯಾಗಿದೆ. ಲಭ್ಯವಿರುವ ಪ್ರತಿ ಕೊಠಡಿಯಿಂದ ಬರುವ ವರಮಾನದಲ್ಲಿ
ಶೇ 13ರಷ್ಟು ಹೆಚ್ಚಳವಾಗಿದೆ.

ADVERTISEMENT

ಐಟಿಸಿ ರತ್ನದೀಪ (ಶ್ರೀಲಂಕಾ) ಹೋಟೆಲ್‌ನ ಲಭ್ಯವಿರುವ ಪ್ರತಿ ಕೊಠಡಿಯಿಂದ ಬರುವ ವರಮಾನದ ವಿಷಯದಲ್ಲಿ ಮಾರುಕಟ್ಟೆ ನಾಯಕನ ಸ್ಥಾನವನ್ನು ಕಾಯ್ದುಕೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ವರಮಾನದಲ್ಲಿ ಶೇ 21ರಷ್ಟು
ಹೆಚ್ಚಳವಾಗಿದ್ದು, ₹1,231 ಕೋಟಿ ಗಳಿಸಿದೆ.

ನವದೆಹಲಿಯ ದ್ವಾರಕಾ ಪ್ರದೇಶದ ಯಶೋಭೂಮಿಯಲ್ಲಿ ಪಂಚತಾರಾ ಹೋಟೆಲ್‌ ನಿರ್ಮಿಸಲು 0.9 ಎಕರೆ ಜಾಗವನ್ನು 91 ವರ್ಷದ ಅವಧಿಗೆ ಐಟಿಸಿ ಹೋಟೆಲ್‌ ಗುತ್ತಿಗೆ ಪಡೆದುಕೊಂಡಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಐಟಿಸಿ ಹೋಟೆಲ್‌ನ ಷೇರಿನ ಬೆಲೆ ₹187.55 ಆಗಿತ್ತು.

(ಬ್ರೋಕರೇಜ್‌ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.