ADVERTISEMENT

ಕೊರೊನಾ ವೈರಸ್‌ ಪರಿಣಾಮ: 1,375 ಅಂಶ ಪತನ ಕಂಡ ಸಂವೇದಿ ಸೂಚ್ಯಂಕ

ಪಿಟಿಐ
Published 30 ಮಾರ್ಚ್ 2020, 19:08 IST
Last Updated 30 ಮಾರ್ಚ್ 2020, 19:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 1,375 ಅಂಶಗಳ ಪತನಗೊಂಡಿತು.

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ದೇಶಿ ಷೇರುಪೇಟೆಗಳಲ್ಲಿನ ಆತಂಕಕಾರಿ ಮನಸ್ಥಿತಿಯು ಮುಂದುವರೆದಿದೆ. ಬ್ಯಾಂಕ್‌, ಹಣಕಾಸು ಮತ್ತು ವಾಹನ ತಯಾರಿಕಾ ಕಂಪನಿಗಳ ಷೇರುಗಳಲ್ಲಿ ಮಾರಾಟ ಒತ್ತಡ ಕಂಡುಬಂದಿತು.

ಹಲವಾರು ರೇಟಿಂಗ್‌ ಸಂಸ್ಥೆಗಳು ದೇಶದ ಆರ್ಥಿಕ ವೃದ್ಧಿ ದರದ ಮುನ್ನೋಟವನ್ನು ತಗ್ಗಿಸಿರುವುದರಿಂದ ಹೂಡಿಕೆದಾರರು ಮಾರಾಟಕ್ಕೆ ಮುಗಿಬಿದ್ದರು. ಹೀಗಾಗಿ ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕವು 1,500 ಅಂಶಗಳವರೆಗೆ ಕುಸಿತ ಕಂಡಿತ್ತು. ದಿನದಂತ್ಯಕ್ಕೆ 1,375 ಅಂಶ ಕಳೆದುಕೊಂಡು (ಶೇ 4.61) 28,440 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 379 ಅಂಶಗಳಿಗೆ ಎರವಾಗಿ (ಶೇ 4.38) 8,281 ಅಂಶಗಳಲ್ಲಿ ಅಂತ್ಯಗೊಂಡಿತು.

ADVERTISEMENT

ಜಾಗತಿಕ ಷೇರುಪೇಟೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವ ವಹಿವಾಟು ಕುಸಿತದ ಆತಂಕವನ್ನು ಕೊರೊನಾ ವೈರಸ್‌ ತೀವ್ರಗೊಳಿಸಿದೆ.

ರೂಪಾಯಿ 70 ಪೈಸೆ ಕುಸಿತ: ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು 70 ಪೈಸೆ ಇಳಿಕೆಯಾಗಿ ₹ 75.59ಕ್ಕೆ ಕುಸಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.