ADVERTISEMENT

ಷೇರು ಸೂಚ್ಯಂಕ ಏರಿಕೆ: ಪೇಟಿಎಂ ಷೇರಿನ ಮೌಲ್ಯ ಏರಿಕೆ

ಪಿಟಿಐ
Published 19 ಫೆಬ್ರುವರಿ 2024, 15:38 IST
Last Updated 19 ಫೆಬ್ರುವರಿ 2024, 15:38 IST
<div class="paragraphs"><p>ಷೇರು ಪೇಟೆ  </p></div>

ಷೇರು ಪೇಟೆ

   

ನವದೆಹಲಿ: ಹಣಕಾಸು ಮತ್ತು ಎಫ್‌ಎಂಸಿಜಿ ಷೇರುಗಳು ಲಾಭ ಕಂಡಿದ್ದರಿಂದ ಸೋಮವಾರ ಷೇರು ಸೂಚ್ಯಂಕಗಳು ಏರಿಕೆಯಾಗಿವೆ.  

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 281 ಅಂಶ ಏರಿಕೆಯಾಗಿ 72,708ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 81 ಅಂಶ ಹೆಚ್ಚಳವಾಗಿ 22,122ರಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. 

ADVERTISEMENT

ಹೂಡಿಕೆದಾರರ ಸಂಪತ್ತು ಒಂದೇ ದಿನ ₹2.20 ಲಕ್ಷ ಕೋಟಿಗೆ ಏರಿಕೆಯಾಗಿದೆ. 

ಪೇಟಿಎಂ ಷೇರಿನ ಮೌಲ್ಯ ಏರಿಕೆ: ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಷೇರುಗಳ ಮೌಲ್ಯ ಶೇ 5ರಷ್ಟು ಏರಿಕೆ ಕಂಡಿದೆ.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ವಿಧಿಸಿದ್ದ ನಿರ್ಬಂಧವನ್ನು ಆರ್‌ಬಿಐ, ಮಾರ್ಚ್‌ 15ರ ವರೆಗೆ ವಿಸ್ತರಿಸಿದೆ. ಜೊತೆಗೆ ಪೇಟಿಎಂ, ಆಕ್ಸಿಸ್‌ ಬ್ಯಾಂಕ್‌ ಸಹಯೋಗದೊಂದಿಗೆ ಕೆಲಸ ನಿರ್ವಹಿಸುವುದಾಗಿ ನಿರ್ಧಾರ ಪ್ರಕಟಿಸಿದ ನಂತರ ಷೇರಿನ ಮೌಲ್ಯ ಏರಿಕೆ ಕಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.