ADVERTISEMENT

ಬ್ಯಾಂಕ್‌ ವಲಯದ ಷೇರುಗಳ ಗಳಿಕೆ: ಸೆನ್ಸೆಕ್ಸ್‌ 995 ಅಂಶ ಏರಿಕೆ

ಏಜೆನ್ಸೀಸ್
Published 27 ಮೇ 2020, 11:10 IST
Last Updated 27 ಮೇ 2020, 11:10 IST
ಷೇರುಪೇಟೆ ವಹಿವಾಟು
ಷೇರುಪೇಟೆ ವಹಿವಾಟು   

ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ಬುಧವಾರ ಸಕಾರಾತ್ಮಕ ವಹಿವಾಟು ನಡೆದಿದ್ದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 995 ಅಂಶ ಹೆಚ್ಚಳದೊಂದಿಗೆ ವಹಿವಾಟು ಮುಕ್ತಾಯವಾಗಿದೆ.

ಹೂಡಿಕೆದಾರರು ಬ್ಯಾಂಕ್ ವಲಯದ ಷೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್‌ ಶೇ 3.2ರಷ್ಟು ಏರಿಕೆಯೊಂದಿಗೆ 31,605 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 285.90 ಅಂಶ ಹೆಚ್ಚಳವಾಗಿ 9,314.95 ಅಂಶ ಮುಟ್ಟಿತು.

ಸೆನ್ಸೆಕ್ಸ್‌ 30 ಕಂಪನಿಗಳ ಷೇರುಗಳ ಪೈಕಿ 24 ಷೇರುಗಳು ಗಳಿಕೆ ದಾಖಲಿಸಿದವು. ಆ್ಯಕ್ಸಿಸ್‌ ಬ್ಯಾಂಕ್‌ ಅತಿ ಹೆಚ್ಚು ಶೇ 14ರಷ್ಟು ಏರಿಕೆ ಕಂಡಿತು. ಐಸಿಐಸಿಐ ಬ್ಯಾಂಕ್‌ ಷೇರು ಶೇ 9, ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇ 5.91 ಹಾಗೂ ಇಂಡಸ್‌ ಬ್ಯಾಂಕ್ ಷೇರು ಬೆಲೆ‌ ಶೇ 5.84ರಷ್ಟು ಗಳಿಕೆಯಾಗಿದೆ.

ADVERTISEMENT

ನಿಫ್ಟಿ ಪಟ್ಟಿಯಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌, ವಿಪ್ರೊ, ಐಸಿಐಸಿಐ, ಗ್ರಾಸಿಮ್‌ ಇಂಡಸ್ಟ್ರೀಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು‌ ಏರಿಕೆ ಕಂಡಿವೆ. ಸನ್‌ ಫಾರ್ಮಾ, ಅಲ್ಟ್ರಾ ಟೆಕ್‌ ಸಿಮೆಂಟ್‌, ಟೈಟಾನ್, ಶ್ರೀ ಸಿಮೆಂಟ್ಸ್‌ ಹಾಗೂ ಏಷ್ಯನ್‌ ಪೇಂಟ್ಸ್‌ ಷೇರುಗಳು ನಷ್ಟ ಅನುಭವಿಸಿವೆ.

ಮಂಗಳವಾರ ಸೆನ್ಸೆಕ್ಸ್‌ 63 ಅಂಶ ಇಳಿಕೆಯಾಗಿ 30,609 ಅಂಶ ಹಾಗೂ ನಿಫ್ಟಿ 10 ಅಂಶ ಇಳಿಕೆ ಕಂಡು 9,029 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.