ADVERTISEMENT

ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ 345 ಅಂಶ ಇಳಿಕೆ

ಪಿಟಿಐ
Published 29 ಡಿಸೆಂಬರ್ 2025, 15:52 IST
Last Updated 29 ಡಿಸೆಂಬರ್ 2025, 15:52 IST
ಸೆನ್ಸೆಕ್ಸ್
ಸೆನ್ಸೆಕ್ಸ್   

ಮುಂಬೈ: ಯುಟಿಲಿಟಿ, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ ಕಂಪನಿ ಷೇರುಗಳ ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸೋಮವಾರ ನಡೆದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ.

ವಿದೇಶಿ ಬಂಡವಾಳದ ಹೊರಹರಿವು ಮತ್ತು ವರ್ಷದ ವಹಿವಾಟು ಅಂತ್ಯಗೊಳ್ಳುತ್ತಿರುವುದು ಸಹ ಇಳಿಕೆಗೆ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 345 ಅಂಶ ಇಳಿಕೆಯಾಗಿ, 84,695ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರು‍ಪೇಟೆ ಸೂಚ್ಯಂಕ ನಿಫ್ಟಿ 100 ಅಂಶ ಕಡಿಮೆಯಾಗಿ, 25,942ಕ್ಕೆ ಕೊನೆಗೊಂಡಿದೆ.

ADVERTISEMENT

ಅದಾನಿ ಪೋರ್ಟ್ಸ್‌ ಷೇರಿನ ಮೌಲ್ಯ ಶೇ 2.22ರಷ್ಟು ಇಳಿಕೆ ಆಗಿದೆ. ಎಚ್‌ಸಿಎಲ್ ಟೆಕ್, ಪವರ್‌ಗ್ರಿಡ್, ಟ್ರೆಂಟ್‌, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಭಾರ್ತಿ ಏರ್‌ಟೆಲ್‌ನ ಷೇರಿನ ಮೌಲ್ಯ ಇಳಿದಿದೆ.

ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್‌, ಹಿಂದೂಸ್ತಾನ್ ಯೂನಿಲಿವರ್ ಮತ್ತು ಎಟರ್ನಲ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 1.70ರಷ್ಟು ಹೆಚ್ಚಳವಾಗಿದೆ. ಪ್ರತೀ ಬ್ಯಾರಲ್ ದರವು 61.67 ಡಾಲರ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.