ADVERTISEMENT

ಖರೀದಿ ಉತ್ಸಾಹದಲ್ಲಿ ಹೂಡಿಕೆದಾರರು: ಸೆನ್ಸೆಕ್ಸ್‌ 408 ಅಂಶ ಚೇತರಿಕೆ 

ಏಜೆನ್ಸೀಸ್
Published 29 ಏಪ್ರಿಲ್ 2020, 8:29 IST
Last Updated 29 ಏಪ್ರಿಲ್ 2020, 8:29 IST
ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು
ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು   

ಮುಂಬೈ: ಹೂಡಿಕೆದಾರರು ಎಚ್‌ಡಿಎಫ್‌ಸಿ ಷೇರುಗಳ ಖರೀದಿಗೆ ಉತ್ಸಾಹ ತೋರಿರುವ ಪರಿಣಾಮ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 408ಅಂಶ ಏರಿಕೆಯಾಗಿದೆ.

ಸೆನ್ಸೆಕ್ಸ್‌ ಬುಧವಾರ 408.31 ಅಂಶ ಚೇತರಿಕೆ ಕಂಡು 32,522.83ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 118.55 ಅಂಶ ಏರಿಕೆಯೊಂದಿಗೆ 9,499.45 ಅಂಶಗಳಲ್ಲಿ ವಹಿವಾಟು ನಡೆದಿದೆ.

ಎಚ್‌ಡಿಎಫ್‌ಸಿ, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಟೆಕ್‌ ಮಹೀಂದ್ರಾ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಎನ್‌ಟಿಪಿಸಿ ಷೇರುಗಳು ಗಳಿಕೆ ಕಂಡಿವೆ. ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಟೈನಾನ್‌, ಹಿಂದುಸ್ತಾನ್‌ ಯೂನಿಲಿವರ್‌, ಏಷಿಯನ್‌ ಪೇಂಟ್ಸ್‌ ಷೇರುಗಳು ನಷ್ಟ ಅನುಭವಿಸಿವೆ.

ADVERTISEMENT

ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 371.44 ಅಂಶ ಏರಿಕೆಯಾಗಿ 32,114.52 ಅಂಶಗಳಲ್ಲಿ ವಹಿವಾಟು ಮುಗಿಸಿತ್ತು. ನಿಫ್ಟಿ ಶೇ 1.06 ಹೆಚ್ಚಳದೊಂದಿಗೆ 9,380.90 ಅಂಶ ತಲುಪಿತ್ತು. ವಿದೇಶಿ ಹೂಡಿಕೆದಾರರು ₹122.15 ಕೋಟಿ ಮೌಲ್ಯದ ಷೇರುಗಳ ಮಾರಾಟ ಮಾಡಿದ್ದಾರೆ.

ಶಾಂಘೈ, ಹಾಂಕಾಂಗ್‌, ಸೋಲ್‌ ಷೇರುಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಮಾನದಂಡ ಬ್ರೆಂಟ್‌ ಫ್ಯೂಚರ್ಸ್‌ ದರ ಶೇ 3.52ರಷ್ಟು ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್‌ಗೆ 23.54 ಅಮೆರಿಕನ್‌ ಡಾಲರ್‌ ತಲುಪಿದೆ.

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 31 ಲಕ್ಷ ದಾಟಿದೆ ಹಾಗೂ ಸಾವಿಗೀಡಾದವರ ಸಂಖ್ಯೆ 2.17 ಲಕ್ಷ ತಲುಪಿದೆ. ಭಾರತದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,007 ಮುಟ್ಟಿದೆ ಹಾಗೂ ಸೋಂಕು ಪ್ರಕರಣಗಳು 31,332 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.