ADVERTISEMENT

ವಹಿವಾಟು ಆರಂಭದಲ್ಲೇ ಸೆನ್ಸೆಕ್ಸ್‌ 1,100 ಅಂಶ ಜಿಗಿತ 

ಏಜೆನ್ಸೀಸ್
Published 17 ಏಪ್ರಿಲ್ 2020, 4:23 IST
Last Updated 17 ಏಪ್ರಿಲ್ 2020, 4:23 IST
ಷೇರುಪೇಟೆಗಳಲ್ಲಿ ಗೂಳಿ ಓಟ
ಷೇರುಪೇಟೆಗಳಲ್ಲಿ ಗೂಳಿ ಓಟ   

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆಯಾದ ಅವಧಿಯಿಂದ ಷೇರುಪೇಟೆಗಳಲ್ಲಿ ಗಳಿಕೆ–ಇಳಿಕೆ ಆಟ ನಿರಂತರವಾಗಿದೆ. ನಿನ್ನೆ ಇಳಿಮುಖವಾಗಿದ್ದ ಷೇರುಪೇಟೆಗಳು ಶುಕ್ರವಾರ ದಿಢೀರ್‌ ಜಿಗಿತ ಕಂಡಿವೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,100 ಅಂಶ ಏರಿಕೆಯಾಗಿದೆ.

ಆರಂಭದಿಂದಲೇ ಷೇರುಪೇಟೆಗಳಲ್ಲಿ ವಹಿವಾಟು ಚೇತರಿಕೆ ಕಂಡು ಬಂದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 293.70 ಅಂಶ ಹೆಚ್ಚಳಗೊಂಡು 9,286.50 ಅಂಶ ತಲುಪಿದೆ. ಸೆನ್ಸೆಕ್ಸ್‌ 1,109.09 ಅಂಶಗಳ ಏರಿಕೆಯೊಂದಿಗೆ 31,711.70 ಅಂಶ ಮುಟ್ಟಿದೆ.

ಬ್ಯಾಂಕ್‌, ಐಟಿ ಹಾಗೂ ಫಾರ್ಮಾ ವಲಯದ ಷೇರುಗಳು ಗಳಿಕೆ ದಾಖಲಿಸಿವೆ. ಟಿಸಿಎಸ್‌ ಷೇರು ಬೆಲೆ ಶೇ 6ರಷ್ಟು ಏರಿಕೆಯಾಗಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಹಲವು ಪ್ರಕಟಣೆಗಳನ್ನು ಮಾಡಬಹುದು ಎಂಬ ಭರವಸೆಯಲ್ಲಿ ಷೇರುಪೇಟೆಗಳಲ್ಲಿ ವಹಿವಾಟುಜಿಗಿತ ಕಂಡಿದೆ.

ADVERTISEMENT

ಗುರುವಾರ ಸೆನ್ಸೆಕ್ಸ್ 222.80 ಅಂಶ ಇಳಿಕೆಯಾಗಿ 30,602.61ರಲ್ಲಿ ವಹಿವಾಟು ಮುಕ್ತಾಯವಾಗಿತ್ತು. ನಿಫ್ಟಿ 67.50 ಕಡಿಮೆಯಾಗಿ 8,992.80 ಅಂಶ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.