ADVERTISEMENT

ಸೆನ್ಸೆಕ್ಸ್, ನಿಫ್ಟಿ ಏರಿಕೆ

ಪಿಟಿಐ
Published 15 ಮೇ 2023, 20:16 IST
Last Updated 15 ಮೇ 2023, 20:16 IST
   

ಮುಂಬೈ: ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆ ಅಬಾಧಿತವಾಗಿ ಮುಂದುವರಿದಿರುವ ಪರಿಣಾಮವಾಗಿ ಪ್ರಮುಖ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಸರಿಸುಮಾರು ಶೇಕಡ 0.50ರಷ್ಟು ಏರಿಕೆ ಕಂಡವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 317 ಅಂಶ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 84 ಅಂಶ ಏರಿಕೆ ಕಂಡವು. ಟಾಟಾ ಮೋಟರ್ಸ್ ಷೇರುಗಳು ಸೋಮವಾರ ಶೇ 2.83ರಷ್ಟು ಏರಿಕೆ ಕಂಡಿವೆ.

‘ಹಣದುಬ್ಬರ ಕಡಿಮೆ ಆಗುತ್ತಿರುವುದು, ವಿದೇಶಿ ಹೂಡಿಕೆಯು ಸ್ಥಿರವಾಗಿ ಹರಿದುಬರುತ್ತಿರುವುದು ಮತ್ತು ಮುಂದಿನ ತ್ರೈಮಾಸಿಕದಲ್ಲಿಯೂ ಕಂಪನಿಗಳ ಗಳಿಕೆ ಚೆನ್ನಾಗಿರುತ್ತದೆ ಎಂಬ ನಿರೀಕ್ಷೆಯಲ್ಲಿ ದೇಶಿ ಸೂಚ್ಯಂಕಗಳು ಏರಿಕೆ ಕಾಣುತ್ತಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ADVERTISEMENT

ವಿದೇಶಿ ಹೂಡಿಕೆದಾರು ಮೇ ತಿಂಗಳಲ್ಲಿ ದೇಶದ ಷೇರುಪೇಟೆಗಳಲ್ಲಿ ಹೆಚ್ಚು ಹಣ ತೊಡಗಿಸುತ್ತಿದ್ದಾರೆ. ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಅವರು ಒಟ್ಟು ₹ 23,152 ಕೋಟಿ ಹೂಡಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.