ADVERTISEMENT

ಷೇರುಪೇಟೆ | ಆರಂಭಿಕ ವಹಿವಾಟು: ಸಾರ್ವಕಾಲಿಕ ದಾಖಲೆ ಹಂತಕ್ಕೆ ಸೆನ್ಸೆಕ್ಸ್, ನಿಫ್ಟಿ

ಪಿಟಿಐ
Published 29 ಜುಲೈ 2024, 6:42 IST
Last Updated 29 ಜುಲೈ 2024, 6:42 IST
<div class="paragraphs"><p>ಷೇರುಪೇಟೆ</p></div>

ಷೇರುಪೇಟೆ

   

(ಪಿಟಿಐ ಚಿತ್ರ)

ಮುಂಬೈ: ದೇಶೀಯ ಈಕ್ವಿಟಿ ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಹೊಸ ಸಾರ್ವಕಾಲಿಕ ದಾಖಲೆ ಮಟ್ಟವನ್ನು ಮುಟ್ಟಿವೆ.

ADVERTISEMENT

ವಿದೇಶಿ ಬಂಡವಾಳದ ಒಳಹರಿವಿನ ಪರಿಣಾಮ ಈ ಏರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 416.62 ಅಂಶಗಳಷ್ಟು ಜಿಗಿದು ಸಾರ್ವಕಾಲಿಕ ದಾಖಲೆಯ 81,749.34ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 145.6 ಅಂಶಗಳಷ್ಟು ಜಿಗಿದು ಹೊಸ ಸಾರ್ವಕಾಲಿಕ ದಾಖಲೆಯ ಮಟ್ಟ 24,980.45ರಲ್ಲಿ ವಹಿವಾಟು ಆರಂಭಿಸಿತು.

ಸೆನ್ಸೆಕ್ಸ್‌ನ ಎನ್‌ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್‌ಲ್ಯಾಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಅಲ್ಟ್ರಾ ಟೆಕ್ ಸಿಮೆಂಟ್ ಅಧಿಕ ಲಾಭ ಗಳಿಸಿದ ಷೇರುಗಳಾಗಿವೆ.

ಟೈಟಾನ್, ಭಾರ್ತಿ ಏರ್‌ಟೆಲ್, ಐಟಿಸಿ ಮತ್ತು ಟೆಕ್ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿದೆ.

ಏಷ್ಯಾ ಮಾರುಕಟ್ಟೆಗಳಾದ ಸೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್ ಲಾಭ ಗಳಿಸಿವೆ. ಶುಕ್ರವಾರ ಅಮೆರಿಕ ಷೇರುಪೇಟೆಯೂ ಏರುಗತಿಯಲ್ಲಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಶುಕ್ರವಾರ ಭಾರತದ ಷೇರುಪೇಟೆಯಲ್ಲಿ ₹2,546.38 ಕೋಟಿಯಷ್ಟು ಹೂಡಿಕೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.