ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಶೇಕಡ 1ಕ್ಕೂ ಹೆಚ್ಚು ಗಳಿಕೆ

ಷೇರುಪೇಟೆಗೆ ವಿದೇಶಿ ಸಾಂಸ್ಥಿಕ ಬಂಡವಾಳ ಒಳಹರಿವು

ಪಿಟಿಐ
Published 6 ಜುಲೈ 2022, 13:00 IST
Last Updated 6 ಜುಲೈ 2022, 13:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಎಫ್‌ಎಂಸಿಜಿ, ಹಣಕಾಸು ಮತ್ತು ವಾಹನ ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚು ಖರೀದಿಸಿದ ಕಾರಣ ದೇಶದ ಷೇರುಪೇಟೆಗಳು ಬುಧವಾರ ಶೇಕಡ 1ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ದಾಖಲಿಸಿದವು.

ದೀರ್ಘ ಸಮಯದ ಬಳಿಕ ವಿದೇಶಿ ಬಂಡವಾಳ ಒಳಹರಿವು ಆಗಿರುವುದು ಕೂಡ ಸೂಚ್ಯಂಕಗಳ ಏರಿಕೆಗೆ ನೆರವಾಯಿತು ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 617 ಅಂಶ ಜಿಗಿತ ಕಂಡು 53,751 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 179 ಅಂಶ ಹೆಚ್ಚಾಗಿ 15,990 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿ.

ADVERTISEMENT

ದಿನದ ವಹಿವಾಟಿನಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್‌ ಶೇಕಡ 1.76ರಷ್ಟು ಮತ್ತು ಸ್ಮಾಲ್‌ ಕ್ಯಾಪ್‌ ಶೇ 0.94ರಷ್ಟು ಏರಿಕೆ ಕಂಡುಕೊಂಡವು.

‘ಎನ್‌ಎಸ್‌ಇನಲ್ಲಿ ಇರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮೇ 30ರ ಬಳಿಕ ಇದೇ ಮೊದಲ ಬಾರಿಗೆ (ಜುಲೈ 5ರಂದು) ₹ 1,295.84 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ’ ಎಂದು ಹೆಮ್‌ ಸೆಕ್ಯುರಿಟೀಸ್‌ನ ಪೋರ್ಟ್‌ಫೋಲಿಯೊ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ನ ಮುಖ್ಯಸ್ಥ ಮೋಹಿತ್‌ ನಿಗಮ್‌ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 2.43ರಷ್ಟು ಏರಿಕೆ ಕಂಡು ಒಂದು ಬ್ಯಾರಲ್‌ಗೆ 105.3 ಡಾಲರ್‌ಗಳಿಗೆ ತಲುಪಿತು.

ವಲಯವಾರು ಏರಿಕೆ (%)

ವಾಹನ;2.73

ಸರಕು ಮತ್ತು ಸೇವೆ;2.47

ಎಫ್‌ಎಂಸಿಜಿ;2.45

ಗ್ರಾಹಕ ಬಳಕೆ ವಸ್ತು;2.42

ರಿಯಲ್‌ ಎಸ್ಟೇಟ್‌;2.39

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.